ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ 5 ದಿನಗಳ ಕಾಲ ಲೋಡ್ ಶೆಡ್ಡಿಂಗ್ !
ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ 5 ದಿನಗಳ ಕಾಲ ಲೋಡ್ ಶೆಡ್ಡಿಂಗ್ !
ಹಿರಿಯೂರಿನಲ್ಲಿ 400 ಕಿಲೋವ್ಯಾಟ್ ವಿದ್ಯುತ್ ವಿತರಣಾ ಕೇಂದ್ರ
ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ 400 ಕಿಲೋವ್ಯಾಟ್ ವಿದ್ಯುತ್ ವಿತರಣಾ ಕೇಂದ್ರ ಆರಂಭಿಸುತ್ತಿದ್ದು , ವಿದ್ಯುತ್ ಗೋಪುರಗಳನ್ನು ಸ್ಥಾಪಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಈ ಕಾರಣದಿಂದಾಗಿ ಜ.20ರಿಂದ 24ರವರೆಗೆ ಕೆಲವು ಭಾಗಗಳಲ್ಲಿ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೆ ಬರಲಿದೆ ಎಂದು ಕೆಪಿಟಿಸಿಎಲ್ ಪ್ರಕಟಣೆ ತಿಳಿಸಿದೆ.
ಐದು ದಿನಗಳ ಕಾಲ ಪ್ರತಿದಿನ ಬೆಳಗಿನ ವೇಳೆ ಮೂರು ಗಂಟೆ ಹಾಗೂ ಸಂಜೆ 1 ತಾಸು ವಿದ್ಯುತ್ ಕಡಿತ ಉಂಟಾಗಲಿದೆ. ಹಿರಿಯೂರು ವಿದ್ಯುತ್ ವಿತರಣಾ ಕೇಂದ್ರದಿಂದಾಗಿ ವಿದ್ಯುತ್ ಸರಬರಾಜು ವ್ಯವಸ್ಥೆ ಇನ್ನಷ್ಟು ಸುಗಮಗೊಳ್ಳಲಿದೆ.
ಐದು ದಿನಗಳ ಕಾಲ ವಿದ್ಯುತ್ ಕಡಿತಕ್ಕೆ ಒಳಗಾಗುವ ಜಿಲ್ಲೆಗಳು : ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಹಾಗೂ ಮಂಡ್ಯ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications