ಮುಂಬಯಿ: ಆಫ್ರಿಕಾ ನ್ಯಾಯಾಧೀಶರಿಂದ ಯುವತಿಯ ಮಾನಭಂಗ

ಮುಂಬಯಿ: ಆಫ್ರಿಕಾ ನ್ಯಾಯಾಧೀಶರಿಂದ ಯುವತಿಯ ಮಾನಭಂಗ
ಆರೋಪಿಯ ಬಂಧನ, ಫೋರೆನ್ಸಿಕ್‌ ಲ್ಯಾಬ್‌ಗೆ ಸಾಕ್ಷ್ಯಗಳ ರವಾನೆ

ಮುಂಬಯಿ : ದಕ್ಷಿಣ ಆಫ್ರಿಕದ ಹೈಕೋರ್ಟ್‌ ನ್ಯಾಯಧೀಶರೊಬ್ಬರನ್ನು ಅತ್ಯಾಚಾರವೆಸಗಿದ ಆರೋಪದ ಮೇಲೆ ದಕ್ಷಿಣ ಮುಂಬಯಿಯಲ್ಲಿ ಬಂಧಿಸಲಾಗಿದೆ.

ಮುಂಬಯಿಯಲ್ಲಿ ನಡೆಯುತ್ತಿರುವ ವಿಶ್ವ ಸಮತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನ್ಯಾಯಧೀಶರೊಬ್ಬರು, ನಗರದ ಸ್ಟಾರ್‌ ಹೋಟೇಲ್‌ನಲ್ಲಿ ತಂಗಿದ್ದ ತಮ್ಮದೇ ದೇಶದ ಪ್ರತಿನಿಧಿಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಮಾನಭಂಗಕ್ಕೊಳಗಾದ ನತದೃಷ್ಟೆ ದಕ್ಷಿಣ ಆಫ್ರಿಕಾದಲ್ಲಿ ಏಡ್ಸ್‌ ಜಾಗೃತಿ ಸಂಪನ್ಮೂಲ ಟ್ರಸ್ಟ್‌ ಒಂದರ ಯೋಜನಾಪ್ರಬಂಧಕರಾಗಿ ಕಾರ್ಯ ನಿರ್ವಹಿಸುತಿದ್ದರು.

ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಈ ಮಹಿಳೆ ತಂಗಿದ್ದ ಹೋಟೆಲ್‌ ಕಫ್‌ಪ್ಯಾರಡೆಯಲ್ಲಿಯೇ ಆತ್ಯಾಚಾರಿ ಸಹ ಉಳಿದುಕೊಂಡಿದ್ದರು. ಈರ್ವರೂ ದಕ್ಷಿಣ ಆಫ್ರಿಕಾ ಪ್ರಜೆಗಳಾಗಿದ್ದು ಜಾಗತೀಕರಣ ವಿರೋಧಿ ವಿಶ್ವ ಸಮತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಂಬಯಿಗೆ ಆಗಮಿಸಿದ್ದರು.

18ಜನವರಿ 2004ರ ಮುಂಜಾನೆ ಪಕ್ಕದ ರೂಂನಲ್ಲಿದ್ದ ಮಹಿಳೆಯ ಮೇಲೆ ಈತ ಅತ್ಯಾಚಾರವೆಸಗಿದ್ದಾನೆ. ಆರೋಪಿ ಹಾಗೂ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ರೂಂನಲ್ಲಿ ಲಭಿಸಿದ ಸಾಕ್ಷ್ಯವಸ್ತುಗಳನ್ನು ಫೋರೆನ್ಸಿಕ್‌ ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.

ಜಾಗತಿಕರಣ ವಿರೋಧಿ, ರೈತಪರ, ಸಮತಾ ,ಸಮಾನತೆ ಮುಂತಾದ ಧ್ಯೇಯಗಳನ್ನು ಹೊಂದಿದ ಜನಪರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವ್ಯಕ್ತಿಯಾಬ್ಬ ಇಂತಹ ಹೀನ ಕೃತ್ಯಗೈದಿರುವ ವಿಪರ್ಯಾಸಕ್ಕೆ ಏನನ್ನೋದು ?

(ಪಿಟಿಐ)

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+