ರೋಷನ್‌ಬೇಗ್ ಸಂಪರ್ಕವೂ ಇಲ್ಲ ಸಂಬಂಧವೂ ಇಲ್ಲ -ತೆಲಗಿ
ರೋಷನ್‌ಬೇಗ್ ಸಂಪರ್ಕವೂ ಇಲ್ಲ ಸಂಬಂಧವೂ ಇಲ್ಲ -ತೆಲಗಿ
ರಾಜಕೀಯ ಕಾರಣಗಳಿಗಾಗಿ ಬೇಗ್-ಭುಜಬಲ್ ಮೇಲೆ ಆರೋಪ...
ಮಾಜಿ ಸಚಿವ ರೋಷನ್‌ಬೇಗ್ ಹಾಗೂ ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಛಗನ್ ಭುಜಬಲ್ ಅವರೊಂದಿಗೆ ತಾನು ಯಾವುದೇ ರೀತಿಯ ಸಂಪರ್ಕ ಹಾಗೂ ಸಂಬಂಧ ಹೊಂದಿರಲಿಲ್ಲ ಎಂದು ಕರೀಂಲಾಲ ತೆಲಗಿ ತಿಳಿಸಿದ್ದಾನೆ. ಕರೀಂಲಾಲನ ಈ ಸ್ಪಷ್ಟನೆಯನ್ನು ಶನಿವಾರ (ಜ.17) ಸುದ್ದಿಗಾರರೊಂದಿಗೆ ಮಾತನಾಡಿದ ಆತನ ವಕೀಲ ಎಂ.ಟಿ.ನಾಣಯ್ಯ ತಿಳಿಸಿದರು.
ಭುಜಬಲ್ ಮತ್ತು ರೋಷನ್‌ಬೇಗ್ ಜೊತೆಯಲ್ಲಿ ನನಗೆ ಸಂಬಂಧವಿರಲಿಲ್ಲ . ಇವರೊಂದಿಗೆ ವ್ಯಾಪಾರ ಸಂಬಂಧವನ್ನೂ ಹೊಂದಿರಲಿಲ್ಲ . ಆದರೆ ರಾಜಕೀಯ ಕಾರಣಗಳಿಗಾಗಿ ಬೇಗ್-ಭುಜಬಲ್ ಮೇಲೆ ಆಪಾದನೆ ಹೊರಿಸಲಾಗುತ್ತಿದೆ ಎಂದು ತೆಲಗಿ ಹೇಳಿರುವುದಾಗಿ ನಾಣಯ್ಯ ಹೇಳಿದರು. ಈ ಇಬ್ಬರೂ ನಾಯಕರು ಛಾಪ ಪಾಪದ ಹಗರಣದಲ್ಲಿ ತೆಲಗಿಯಾಂದಿಗೆ ಸಂಬಂಧ ಹೊಂದಿದ್ದಾರೆ ಎನ್ನುವ ಪ್ರತಿಪಕ್ಷಗಳ ಒತ್ತಾಯದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತೆಲಗಿ ವಿಚಾರಣೆ : ಮಹಾರಾಷ್ಟ್ರದ ವಿಶೇಷ ತನಿಖಾ ದಳ (ಸಿಟ್) ಕರೀಂಲಾಲ ತೆಲಗಿಯನ್ನು ವಿಚಾರಣೆ ನಡೆಸುವುದಕ್ಕಾಗಿ ಶನಿವಾರ ಪರಪ್ಪನ ಅಗ್ರಹಾರದಲ್ಲಿನ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿತು. ವಿಚಾರಣೆಯ ವಿವರಗಳು ತಿಳಿದುಬಂದಿಲ್ಲ .
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications