ಜೆಎ-ಸ್-ಎ-ಸ್ ಮಠದಿಂದ ಸುತ್ತೂ-ರು ‘ಮಾ-ದ-ರಿ ಆರೋ-ಗ್ಯ ಗ್ರಾಮ-’
ಜೆಎ-ಸ್-ಎ-ಸ್ ಮಠದಿಂದ ಸುತ್ತೂ-ರು ‘ಮಾ-ದ-ರಿ ಆರೋ-ಗ್ಯ ಗ್ರಾಮ-’
3720 ಗ್ರಾಮೀಣರಿಗೆ ಉಚಿತ ಆರೋಗ್ಯ ತಪಾಸಣೆ, ಉನ್ನತ ಚಿಕಿತ್ಸೆ
ಕಳೆದ ನಾಲ್ಕು ತಿಂಗಳುಗಳಿಂದಲೇ ಸುತ್ತೂರನ್ನು ಮಾದರಿ ಆರೋಗ್ಯ ಗ್ರಾಮವನ್ನಾಗಿ ರೂಪಿಸುವ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ ಈ ಯೋಜನೆಯ ಸವಲತ್ತಿನ ವ್ಯಾಪ್ತಿ 3720 ಗ್ರಾಮೀಣರನ್ನು ಒಳಗೊಂಡಿದ್ದು , ಪ್ರತಿಯಾಬ್ಬರಿಗೂ ಉಚಿತ ಆರೋಗ್ಯ ತಪಾಸಣೆ ನಡೆಸಲಾಗಿದೆ ಅಗತ್ಯ ಇರುವವರಿಗೆ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸೇರಿದಂತೆ ಉನ್ನತ ವೈದ್ಯಕೀಯ ಚಿಕಿತ್ಸೆಯ ಸವಲತ್ತು ಕಲ್ಪಿಸಲಾಗುವುದು ಎಂದು ಮಠದ ಮೂಲಗಳು ತಿಳಿಸಿವೆ
ಬೆಂಗಳೂರಿನ ನಾರಾಯಣ ಹೃದಯಾಲಯದೊಂದಿಗಿನ ಸಹಯೋಗದ ಮೂಲಕ ಹೃದ್ರೋಗಿಗಳಿಗೆ ಚಿಕಿತ್ಸೆ ದೊರೆಯಲಿದೆ ಇದೇ ಜನವರಿ ತಿಂಗಳ ಅಂತ್ಯದೊಳಗೆ ಸುತ್ತೂರನ್ನು ಮಾದರಿ ಆರೋಗ್ಯ ಗ್ರಾಮವನ್ನಾಗಿ ಘೋಷಿಸಲಾಗುವುದು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್‌ಪಿಮಂಜುನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ
ಕೃಷಿಕರು ಬಿತ್ತನೆ ಹಾಗೂ ಇನ್ನಿತರ ಕೃಷಿ ಕಾರ್ಯಗಳಲ್ಲಿ ತೊಡಗಿರುವುದರಿಂದ ಹಲವು ಶಸ್ತ್ರ ಚಿಕಿತ್ಸೆಗಳನ್ನು ಮುಂದೂಡಲಾಗಿದೆ ಎಲ್ಲ ಮಕ್ಕಳಿಗೂ ವಿಟಮಿನ್ ಸಿರಪ್ ನೀಡಲಾಗಿದ್ದು - 20 ಮಕ್ಕಳನ್ನು ಹೆಚ್ಚಿನ ತಪಾಸಣೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಮಂಜುನಾಥ್ ಹೇಳಿದರು
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications