ಲಾಲ್‌ಬಾಗ್‌ ಗಾಜಿನ ಮನೆ ಜಗಮಗ: ಪ್ರವೇಶ ಶುಲ್ಕ ದುಪ್ಪಟ್ಟು?

ಲಾಲ್‌ಬಾಗ್‌ ಗಾಜಿನ ಮನೆ ಜಗಮಗ: ಪ್ರವೇಶ ಶುಲ್ಕ ದುಪ್ಪಟ್ಟು?
ದೀಪಾಲಂಕಾರದ ಗಾಜಿನ ಮನೆ ವಿಶೇಷ ಸಂದರ್ಭಗಳಿಗೆ ಮಾತ್ರ ಮೀಸಲು

ಬೆಂಗಳೂರು : ನಗರದ ಲಾಲ್‌ಬಾಗ್‌ನಲ್ಲಿನ ಗಾಜಿನಮನೆಯನ್ನು ಮೂರು ಕೋಟಿ ರುಪಾಯಿ ವೆಚ್ಚದಲ್ಲಿ ನವೀಕರಿಸಲಾಗಿದ್ದು , ನವೀಕೃತ ಗಾಜಿನ ಮನೆಯನ್ನು ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸಂಕ್ರಾಂತಿಯಂದು (ಜ.15) ಉದ್ಘಾಟಿಸಿದರು.

ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಗಾಜಿನಮನೆಯ ನವೀಕರಣ ಕಾರ್ಯವನ್ನು ಪೂರೈಸಿದೆ. ವಿಶೇಷ ದರ್ಜೆಯ ಗಾಜುಗಳನ್ನು ಗಾಜಿನ ಮನೆಯ ನವೀಕರಣ ಕಾರ್ಯಕ್ಕೆ ಬಳಸಲಾಗಿದೆ. ಒಟ್ಟು 3,505 ಗಾಜುಗಳನ್ನು ನವೀಕರಣ ಕಾರ್ಯಕ್ಕೆ ಬಳಸಲಾಗಿದೆ. ದೀಪಾಲಂಕಾರಕ್ಕಾಗಿ 175 ಕೊಳವೆ ದೀಪಗಳನ್ನು ಬಳಸಲಾಗಿದೆ.

ಗಾಜಿನಮನೆಯ ದೀಪಾಲಂಕಾರ ಜನರನ್ನು ವಿಶೇಷವಾಗಿ ಗಮನ ಸೆಳೆಯುತ್ತಿದೆ. ಆದರೆ, ಗಾಜಿನ ಮನೆಯ ದೀಪಾಲಂಕಾರದ ಸೊಬಗನ್ನು ಜನತೆಯು ವಿಶೇಷ ಸಂದರ್ಭಗಳಲ್ಲಿ ಮಾತ್ರ ನೋಡಬಹುದಾಗಿದೆ. ಸಸ್ಯ ಉದ್ಯಾನದ ಸ್ವಾಭಾವಿಕ ಪರಿಸರಕ್ಕೆ ಕೋರೈಸುವ ಬೆಳಕು ಧಕ್ಕೆ ಉಂಟು ಮಾಡುವ ಆತಂಕವಿರುವುದರಿಂದ, ದೀಪಾಲಂಕಾರದ ಗಾಜಿನ ಮನೆ ವಿಶೇಷ ಸಂದರ್ಭಗಳಿಗೆ ಮಾತ್ರ ಮೀಸಲು ಎಂದು ತೋಟಗಾರಿಕಾ ಇಲಾಖೆಯ ನಿರ್ದೇಶಕ ಜಿ.ಕೆ.ವಸಂತಕುಮಾರ್‌ ತಿಳಿಸಿದ್ದಾರೆ.

ಲಾಲ್‌ಬಾಗ್‌ ಪ್ರವೇಶ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾಪ ತೋಟಗಾರಿಕಾ ಇಲಾಖೆಯ ಮುಂದಿದೆ. ಪ್ರಸ್ತುತ ಇರುವ 5 ರುಪಾಯಿ ಪ್ರವೇಶ ಶುಲ್ಕವನ್ನು 10 ರುಪಾಯಿಗೆ ಹೆಚ್ಚಿಸುವುದು ಇಲಾಖೆಯ ಉದ್ದೇಶ. ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ಹೊಸ ಪ್ರವೇ ಶುಲ್ಕ ಜಾರಿಯಾಗಬಹುದು ಎಂದು ವಸಂತಕುಮಾರ್‌ ಹೇಳಿದರು.

(ಇನ್ಫೋ ವಾರ್ತೆ)

Post your views

ಮುಖಪುಟ / ಬೆಂಗಳೂರು ಡೈರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+