ಅಪಘಾತದಲ್ಲಿ ರಕ್ಷಣಾ ಸಚಿವ ಫರ್ನಾಂಡಿಸ್‌ಗೆ ಸಣ್ಣಪುಟ್ಟ ಗಾಯ
ಅಪಘಾತದಲ್ಲಿ ರಕ್ಷಣಾ ಸಚಿವ ಫರ್ನಾಂಡಿಸ್‌ಗೆ ಸಣ್ಣಪುಟ್ಟ ಗಾಯ
ಮಂಜಿನ ತೆರೆಯಲ್ಲಿ ಟ್ರಕ್‌ಗೆ ಗುದ್ದಿದ ಸಚಿವರ ವಾಹನ
ಬಿಹಾರದ ನಳಂದಾ ಜಿಲ್ಲೆಯ ಫತುಹ-ಬಿಹಾರ್‌ಷರೀಫ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಪ್ರಯಾಣಿಸುತ್ತಿದ್ದಾಗ- ಸಚಿವರ ವಾಹನ ಹಾಗೂ ಟ್ರಕ್ ನಡುವೆ ಸಂಭವಿಸಿದ ಢಿಕ್ಕಿಯಲ್ಲಿ ಫರ್ನಾಂಡಿಸ್ ಅವರಿಗೆ ಗಾಯಗಳಾಗಿವೆ. ಹಿಲ್ಸಾದಲ್ಲಿನ ಕಾರ್ಯಕ್ರವೊಂದರಲ್ಲಿ ಭಾಗವಹಿಸಿದ ನಂತರ ರಾಜಗಿರ್ ಸರ್ಕ್ಯೂಟ್ ಹೌಸ್‌ನಲ್ಲಿ ತಂಗಲು ಫರ್ನಾಂಡಿಸ್ ತೆರಳುತ್ತಿದ್ದಾಗ ಈ ಅಪಘತ ಸಂಭವಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮಂಜು ಮುಸುಕಿದ್ದುದರಿಂದ ಸಚಿವರು ಪ್ರಯಾಣಿಸುತ್ತಿದ್ದ ಟಾಟಾ ಕ್ವಾಲಿಸ್ ವಾಹನ ಟ್ರಕ್‌ಗೆ ಗುದ್ದಿದೆ ಎನ್ನಲಾಗಿದೆ. ವಾಹನದ ಬಾನೆಟ್ ಅಪಘಾತದಲ್ಲಿ ಹಾನಿ ಅನುಭವಿಸಿದೆ.
ರಾಜಗಿರ್‌ನ ಖಾಸಗಿ ವೈದ್ಯರು ಫರ್ನಾಂಡಿಸ್ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಫರ್ನಾಂಡಿಸ್ ಅವರಿಗೆ ಕಾಲಿಗೆ ಸ್ವಲ್ಪ ಪೆಟ್ಟಾಗಿದ್ದು , ಅಪಘಾತದ ನಂತರ ಸಚಿವರು ತಲೆಶೂಲೆಯಿಂದ ನರಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications