ಭಾರತದಲ್ಲಿನ ಕಾಲ್‌ ಸೆಂಟರ್‌ ಸೇವೆ ಕಳಪೆ ಕಳಪೆ !

ಭಾರತದಲ್ಲಿನ ಕಾಲ್‌ ಸೆಂಟರ್‌ ಸೇವೆ ಕಳಪೆ ಕಳಪೆ !
ಬ್ರಿಟನ್ನಿನ ಇಂಗ್ಲಿಷು ಗ್ರಾಹಕರು ಅಸಮಾಧಾನದ ಅಪಸ್ವರ ಹಾಡುತ್ತಿದ್ದಾರೆ...

  • ದಟ್ಸ್‌ಕನ್ನಡ ಬ್ಯೂರೊ
Indian call centre quality declining, says British surveyಸಂತೆಯ ಹೊತ್ತಿಗೆ ಮೂರು ಮೊಳ ನೇಯ್ದರು ಅನ್ನುವ ಒಂದು ಮಾತಿದೆಯಲ್ಲ ; ಭಾರತದಲ್ಲಿನ ಕಾಲ್‌ ಸೆಂಟರ್‌ಗಳ ಸ್ಥಿತಿ ಹಾಗಾಗಿದೆಯಾ ? ಹೌದೆನ್ನುತ್ತಿದ್ದಾರೆ ಈ ಇಂಗ್ಲಿಷು ಮಂದಿ.

ಭಾರತೀಯರಿಗೆ ಇಂಗ್ಲಿಷು ಸಲೀಸು ! ಜಗತ್ತಿನ ಅತ್ಯುತ್ತಮ ಇಂಗ್ಲಿಷು ಇಲ್ಲಿ ಉಸಿರಾಡುತ್ತಿದೆ ಎಂದು ನಮ್ಮ ಕಾನ್ವೆಂಟ್‌ ಕೇಂದ್ರಿತ ಮಂದಿ ಘೋಷಣೆಗಳ ಹೊರಡಿಸುತ್ತಿದ್ದರೆ, ಭಾಷೆಯೇ ಜೀವದ್ರವ್ಯವಾದ ಕಾಲ್‌ಸೆಂಟರ್‌ಗಳಲ್ಲಿನ ಭಾರತೀಯರ ಇಂಗ್ಲಿಷು ಕುರಿತು ಬ್ರಿಟೀಷ್‌ ಪ್ರಜೆಗಳು ಸೊಲ್ಲೆತ್ತಿದ್ದಾರೆ. ಅವರದು ಕಾಲ್‌ ಸೆಂಟರ್‌ ಕುರಿತ ಕಿರಿಕ್ಕು.

ವಿಷಯ ಏನೆಂದರೆ-
ಭಾರತದಲ್ಲಿನ ಕಾಲ್‌ ಸೆಂಟರ್‌ಗಳ ಸೇವೆ ಅಷ್ಟೇನೂ ಉತ್ತಮವಾಗಿಲ್ಲ ಎಂದು ಇತ್ತೀಚಿನ ಲಂಡನ್‌ ಕೇಂದ್ರಿತ ಸಮೀಕ್ಷೆಯಾಂದು ತಿಳಿಸಿದೆ.

ಭಾರತದಲ್ಲಿನ ಕಾಲ್‌ ಸೆಂಟರ್‌ಗಳೊಂದಿಗೆ ವ್ಯವಹರಿಸುವ ಬ್ರಿಟನ್ನಿನ ಗ್ರಾಹಕರು ತೃಪ್ತರಾಗಿಲ್ಲ . ಭಾರತೀಯ ನೌಕರರ ಪ್ರತಿಕ್ರಿಯೆ ಅಷ್ಟೇನೂ ಉತ್ತಮವಾಗಿಲ್ಲ . ಪಾಶ್ಚಿಮಾತ್ಯ ಕಂಪನಿಗಳ ಬೇಡಿಕೆಯನ್ನು ಪೂರೈಸುವ ಆತುರದಲ್ಲಿ ಕಡಿಮೆ ವಿದ್ಯಾರ್ಹತೆಯ ಹಾಗೂ ಅನನುಭವಿ ನೌಕರರನ್ನು ನೇಮಿಸಿಕೊಂಡಿರುವುದರಿಂದ ಕಾಲ್‌ಸೆಂಟರ್‌ಗಳ ಕಾರ್ಯಕ್ಷಮತೆ ತೀವ್ರಗತಿಯಲ್ಲಿ ಇಳಿಮುಖವಾಗುತ್ತಿದೆ ಎಂದು ಸಮೀಕ್ಷೆ ಹೇಳಿದೆ.

ಎಡವಟ್ಟಾಗಿರುವುದು ಎಲ್ಲಿ ? ಸಮೀಕ್ಷೆಯ ಪ್ರಕಾರ- ಭಾರತದಲ್ಲಿನ ಕಾಲ್‌ ಸೆಂಟರ್‌ಗಳ ನೌಕರರು ಸಾಂಪ್ರದಾಯಿಕ ತರಬೇತಿಯನ್ನು ಹೊಂದಿರುವುದರಿಂದ ಕೆಲವು ವೇಳೆ ಬ್ರಿಟೀಷ್‌ ಸಮುದಾಯದ ಗ್ರಾಹಕರ ಇಂಗಿತವನ್ನು ಓಲೈಸುವಲ್ಲಿ ವಿಫಲರಾಗುತ್ತಿದ್ದಾರೆ. ಕೆಲವು ನೌಕರರನ್ನು ಅರ್ಥ ಮಾಡಿಕೊಳ್ಳುವುದು ಕೂಡ ಕಠಿಣವಾಗಿದೆ.

ಅನೇಕ ಗ್ರಾಹಕರು ಕಾಲ್‌ ಸೆಂಟರ್‌ನ ನೌಕರರೊಂದಿಗೆ ಮಾತನಾಡುವಲ್ಲಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಶೇ.60ಕ್ಕಿಂತ ಹೆಚ್ಚು ಮಂದಿ ವಿದೇಶದಲ್ಲಿನ ಕಾಲ್‌ ಸೆಂಟರ್‌ಗಳನ್ನು ತಾವು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.

ದಿ ಈವಿನಿಂಗ್‌ ಸ್ಟಾಂಡರ್ಡ್‌ ಹೇಳುವಂತೆ, ಪ್ರಸ್ತುತ ಸುಮಾರು 1 ಲಕ್ಷ 60 ಸಾವಿರ ಮಂದಿ ಭಾರತೀಯರು ಕಾಲ್‌ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು 5 ವರ್ಷಗಳಲ್ಲಿ ಇನ್ನೂ 2 ಮಿಲಿಯನ್‌ ಉದ್ಯೋಗಗಳು ಭಾರತದ ಕಾಲ್‌ಸೆಂಟರ್‌ ಉದ್ಯಮದಲ್ಲಿ ಸೃಷ್ಟಿಯಾಗಲಿವೆ.

ಕಾಲ್‌ ಸೆಂಟರ್‌ ರಿಸರ್ಚ್‌ ಸ್ಪೆಷಲಿಸ್ಟ್‌ ಮೈಕ್‌ ಅಲೆನ್‌ ಕೂಡ ಭಾರತೀಯ ಕಾಲ್‌ ಸೆಂಟರ್‌ಗಳಲ್ಲಿನ ನೌಕರರ ಅನನುಭವದ ಕುರಿತು ಅತೃಪ್ತಿ ವ್ಯಕ್ತಪಡಿಸುತ್ತಾರೆ. ನಾವು ಉತ್ತಮ ಶಿಕ್ಷಣದ ಏಷ್ಯನ್ನರನ್ನು ಕೆಲಸಕ್ಕೆ ನಿರೀಕ್ಷಿಸುತ್ತೇವೆ. ಆದರೆ ಭಾರತದ ಕಂಪನಿಗಳು ಕಳಪೆ ಮಂದಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸೇವೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಅಲೆನ್‌ ದೂರುತ್ತಾರೆ.

ಗ್ರಾಹಕರೊಂದಿಗೆ ಭಾರತೀಯ ನೌಕರರು ಸಂವಹನದ ತೊಂದರೆ ಎದುರಿಸುತ್ತಿರುವುದು ನಮ್ಮ ಅಧ್ಯಯನಗಳಿಂದ ಸ್ಪಷ್ಟವಾಗಿ ತಿಳಿದುಬಂದಿದೆ ಎಂದೂ ಅಲೆನ್‌ ಹೇಳುತ್ತಾರೆ.

ಅಲ್ಲಿ , ಭಾರತೀಯ ಕಾಲ್‌ ಸೆಂಟರ್‌ಗಳ ಬಗ್ಗೆ ಬ್ರಿಟೀಷರು ಅಪಸ್ವರ ಎತ್ತಿದ್ದರೂ, ಬೆಂಗಳೂರಲ್ಲಿ ಮಾತ್ರ ಕಾಲ್‌ ಸೆಂಟರ್‌ಗಳ ಕಲರವ ಮುಂದುವರಿದಿದೆ. ಬೆಂಗಳೂರಿನ ಹುಡುಗ ಹುಡುಗಿಯರು ಈಗ ಅಮೆರಿಕನ್‌ ಆ್ಯಕ್ಸೆಂಟ್‌ನಲ್ಲಿ ಇಂಗ್ಲಿಷು ಮಾತಾಡುತ್ತಾರೆ. ಅವರಿಗೆ ಕಾಲ್‌ ಸೆಂಟರ್‌ಗಳಲ್ಲಿ ಪ್ರತಿದಿನ ಇಂಗ್ಲಿಷು ಬೋಧನೆ. ಪಾಠ 1- ಎ.. ಬಿ.. ಸಿ.. ಡಿ..

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+