ಇಂಟರ್ನೆಟ್-ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಸವಾರಿ: ಜೋಷಿ ಆತಂಕ
ಇಂಟರ್ನೆಟ್-ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಸವಾರಿ: ಜೋಷಿ ಆತಂಕ
ಎಲ್ಲ ಭಾರತೀಯ ಭಾಷೆಗಳಲ್ಲೂ ಕಂಪ್ಯೂಟರ್ ಪ್ರೋಂಗ್ರಾಂಗಳು ಅಗತ್ಯ
ವಿದ್ಯುನ್ಮಾನ ವಿಭಾಗದಲ್ಲಿ ಇಂಗ್ಲಿಷ್ ಭಾಷೆ ಏಕಸ್ವಾಮ್ಯ ಸಾಧಿಸುತ್ತಿರುವುದು ಭಾರತೀಯ ಭಾಷೆಗಳ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಾರಕ ಎಂದು ಸಚಿವ ಮುರಳಿ ಮನೋಹರ ಜೋಷಿ ಅಭಿಪ್ರಾಯಪಟ್ಟರು. ಅನಿವಾಸಿ ಭಾರತೀಯರಿಗಾಗಿ ತಮಿಳು ಮೂಲದ ವೆಬ್ ಕಲಿಕೆ ಕಾರ್ಯಕ್ರಮವೊಂದಕ್ಕೆ ಚಾಲನೆ ನೀಡಿ ಹಾಗೂ ಭಾರತೀಯ ಭಾಷೆಗಳ ಸಂಸ್ಥೆಯಲ್ಲಿನ ಅಂತರರಾಷ್ಟ್ರೀಯ ಅತಿಥಿಗೃಹವೊಂದಕ್ಕೆ ಶಿಲಾನ್ಯಾಸ ನೆರವೇರಿಸಿದ ಸಂದರ್ಭದಲ್ಲಿ (ಜ.9ರ ರಾತ್ರಿ) ಜೋಷಿ ಮಾತನಾಡುತ್ತಿದ್ದರು.
ಇಂಟರ್ನೆಟ್ ಮತ್ತು ಕಂಪ್ಯೂಟರ್ ಆಳ್ವಿಕೆಯ ಹೊಸ ಯುಗವೊಂದಕ್ಕೆ ಸಮಾಜ ಕಾಲಿಟ್ಟಿದೆ. ಆದರೆ, ಈ ಮಾಧ್ಯಮದ ತುಂಬಾ ಇಂಗ್ಲಿಷೇ ತುಂಬಿದೆ ಎಂದು ಜೋಷಿ ವಿಷಾದಿಸಿದರು.
ಎಲ್ಲ ಭಾರತೀಯ ಭಾಷೆಗಳಲ್ಲೂ ಕಂಪ್ಯೂಟರ್ ಪ್ರೋಂಗ್ರಾಂಗಳನ್ನು ರೂಪಿಸುವುದು ಅತ್ಯಗತ್ಯ ಎಂದು ಸಚಿವ ಮುರಳಿ ಮನೋಹರ ಜೋಷಿ ಅಭಿಪ್ರಾಯಪಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications