ಪ್ರವಾಸಿ ಭಾರತೀಯ ದಿವಸ ಉತ್ಸವಕ್ಕೆ ದೀಪಧಾರಿಯಾದ ಪ್ರಧಾನಿ
ಪ್ರವಾಸಿ ಭಾರತೀಯ ದಿವಸ ಉತ್ಸವಕ್ಕೆ ದೀಪಧಾರಿಯಾದ ಪ್ರಧಾನಿ
ಮೂರು ದಿನಗಳ ಉತ್ಸವದಲ್ಲಿ ನೈಪಾಲ್, ಮೇಘನಾದ್, ಬರ್ಗಿ....
ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ದೀಪ ಬೆಳಗಿಸುವ ಮೂಲಕ ಪ್ರಧಾನಿ ವಾಜಪೇಯಿ ಬಹು ನಿರೀಕ್ಷೆಯ ಪ್ರವಾಸಿ ಭಾರತೀಯ ದಿವಸ ಉತ್ಸವಕ್ಕೆ ನಾಂದಿ ಹಾಡಿದರು. 61 ದೇಶಗಳಲ್ಲಿ ನೆಲೆಸಿರುವ 1500ಕ್ಕೂ ಹೆಚ್ಚು ಭಾರತೀಯ ಮೂಲದ ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಗಯಾನದ ಅಧ್ಯಕ್ಷ ಭರತ್ ಜಗ್‌ದೇವೊ, ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಹಾಗೂ ಪಿಬಿಡಿ ಅಧ್ಯಕ್ಷ ಮತ್ತು ಯುಕೆಯಲ್ಲಿನ ಭಾರತದ ಮಾಜಿ ರಾಯಭಾರಿ ಡಾ.ಎಲ್.ಎಂ.ಸಿಂಘ್ವಿ ಪ್ರವಾಸಿ ಭಾರತೀಯ ದಿವಸ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರವಾಸಿ ಭಾರತೀಯ ಗಣ್ಯರಾದ ಸರ್ ವಿ.ಎಸ್.ನೈಪಾಲ್, ಲಾರ್ಡ್ ಮೇಘನಾದ್ ದೇಸಾಯಿ, ಲಾರ್ಡ್ ಆರ್.ಕೆ.ಬರ್ಗಿ ಮುಂತಾದವರು ಮೂರು ದಿನಗಳ ಉತ್ಸವದಲ್ಲಿ ಪಾಲ್ಗೊಳ್ಳುವರು.
(ಏಜನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications