ಇನ್ಫೋಸಿಸ್ ಲೆಕ್ಕಪತ್ರ: ಸಂಕ್ರಾಂತಿಯ ಸುಗ್ಗಿ , ಮುಟ್ಟಿದ್ದೆಲ್ಲ ಹುಗ್ಗಿ !
ಇನ್ಫೋಸಿಸ್ ಲೆಕ್ಕಪತ್ರ: ಸಂಕ್ರಾಂತಿಯ ಸುಗ್ಗಿ , ಮುಟ್ಟಿದ್ದೆಲ್ಲ ಹುಗ್ಗಿ !
23,209ಕ್ಕೇರಿದ ಇನ್ಫೋಸಿಸ್-ಪ್ರೊಜಿಯಾನ್ ನೌಕರರ ಸಂಖ್ಯೆ
ಡಿಸೆಂಬರ್ ಅಂತ್ಯಕ್ಕೆ ಕೊನೆಗೊಂಡ ತ್ರೆೃಮಾಸಿಕದಲ್ಲಿ ಇನ್ಫೋಸಿಸ್ ಲಿಮಿಟೆಡ್ 328.14 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದ್ದು , ಲಾಭದ ಪ್ರಮಾಣ ಪ್ರತಿಶತ 28.02ರಷ್ಟು ಹೆಚ್ಚಾಗಿದೆ. ಕಳೆದ ವಿತ್ತ ವರ್ಷದ ಇದೇ ತ್ರೆೃಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 256.31 ಕೋಟಿ ರುಪಾಯಿಗಳಷ್ಟಿತ್ತು.
2003ನೇ ಇಸವಿಯ ಸೆಪ್ಟಂಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಕಂಪನಿಯ ಆದಾಯ 1,235.26 ಕೋಟಿ ರುಪಾಯಿಗಳಿಗೆ ಹೆಚ್ಚಿದ್ದು , ಶೇ.28-86ರ ನೆಗೆತ ಸಾಧಿಸಿದೆ. ಕಳೆದ ವಿತ್ತ ವರ್ಷದ ಇದೇ ತ್ರೆೃಮಾಸಿಕದಲ್ಲಿ ಈ ಪ್ರಮಾಣ 958.64 ಕೋಟಿ ರುಪಾಯಿಗಳಷ್ಟಿತ್ತು .
2003ರ ಸೆಪ್ಟಂಬರ್-ಡಿಸೆಂಬರ್ ತ್ರೆೃಮಾಸಿಕದಲ್ಲಿ ಇನ್ಫೋಸಿಸ್ ಕಂಪನಿ 30 ಹೊಸ ಗ್ರಾಹಕರನ್ನು ಪಡೆದಿದ್ದು , ತನ್ನ ಸಹಯೋಗಿ ಕಂಪನಿಯಾದ ಪ್ರೊಜಿಯಾನ್‌ನೊಂದಿಗೆ 3,666 ನೌಕರರನ್ನು ನೇಮಿಸಿಕೊಂಡಿದೆ. ಪ್ರಸ್ತುತ ಇನ್ಫೋಸಿಸ್ ಮತ್ತು ಪ್ರೊಜಿಯಾನ್‌ನ ನೌಕರರ ಸಂಖ್ಯೆ 23,209ಕ್ಕೇರಿದೆ.
ಹೊಸ ಸವಾಲು ಮತ್ತು ಸಾಧ್ಯತೆಗಳನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಇನ್ಫೋಸಿಸ್ ಹೆಸರು ಗಳಿಸಿದೆ. ಇನ್ಫೋಸಿಸ್ ಬಗೆಗೆ ಗ್ರಾಹಕರ ನಿರೀಕ್ಷೆಗಳೂ ಹೆಚ್ಚಾಗಿವೆ. ತ್ವರಿತವಾಗಿ ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿ ಮತ್ತು ಸ್ಪರ್ಧಾತ್ಮಕ ಪರಿಸರವನ್ನು ನಾವಿಂದು ಕಾಣುತ್ತಿದ್ದೇವೆ ಎಂದು ಇನ್ಫೋಸಿಸ್‌ನ ಸಿಇಒ, ಅಧ್ಯಕ್ಷ ಮತ್ತು ಕಾರ್ಯ ನಿರ್ವಾಹಕ ನಿರ್ದೇಶಕ ನಂದನ್ ನೀಲೇಕಣಿ ತಿಳಸಿದ್ದಾರೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications