‘ಮೊಸಳೆ ಕಣ್ಣೀರು ಸಾಕು, ಆನ್‌ಲೈನ್ ಲಾಟರಿ ನಿಷೇಧಿಸಲೇಬೇಕು’
‘ಮೊಸಳೆ ಕಣ್ಣೀರು ಸಾಕು, ಆನ್‌ಲೈನ್ ಲಾಟರಿ ನಿಷೇಧಿಸಲೇಬೇಕು’
ಆನ್‌ಲೈನ್ ಲಾಟರಿ ನಿಷೇಧಕ್ಕೆ ಒತ್ತಾಯಿಸಿ ಬಿಜೆಪಿ ಸಭಾತ್ಯಾಗ
ಆನ್‌ಲೈನ್ ಲಾಟರಿ ಗ್ಯಾಬ್ಲಿಂಗ್ ಅಲ್ಲದೆ ಬೇರೆಯೇನೂ ಅಲ್ಲ . ಈ ಲಾಟರಿ ದಂಧೆಯನ್ನು ಸರ್ಕಾರ ನಿಷೇಧಿಸಬೇಕು ಎಂದು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಪ್ರಶ್ನೋತ್ತರ ಅವಧಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಮುಖ್ಯಮಂತ್ರಿ ಎಸ್ಸೆಂ. ಕೃಷ್ಣ ಅವರ ಪರವಾಗಿ ಯಡಿಯೂರಪ್ಪನವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಿ.ಬಿ.ಚಂದ್ರೇಗೌಡರ ಉತ್ತರ ಬಿಜೆಪಿ ಸದಸ್ಯರಿಗೆ ತೃಪ್ತಿ ತರಲಿಲ್ಲ . ಆನ್‌ಲೈನ್ ಲಾಟರಿಯ ಕುರಿತು ಸರ್ಕಾರ ತನ್ನದೇ ಆದ ರೀತಿನೀತಿ ಹೊಂದಿದ್ದು , ನಿಷೇಧದ ಕುರಿತು ಬಜೆಟ್ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಚಂದ್ರೇಗೌಡ ಹೇಳಿದರು. ಆದರೆ ಸಚಿವರ ಉತ್ತರದಿಂದ ತೃಪ್ತರಾಗದ ಬಿಜೆಪಿ ಸದಸ್ಯರು ಯಡಿಯೂರಪ್ಪನವರ ನೇತೃತ್ವದಲ್ಲಿ ಸದನದಿಂದ ಹೊರನಡೆದರು.
ಆನ್‌ಲೈನ್ ಲಾಟರಿಯ ವಿರುದ್ಧದ ಜನತೆಯ ಪ್ರತಿಭಟನೆಯನ್ನು ಸರ್ಕಾರ ಗಮನಿಸಿದೆ. ಆದರೂ ಆನ್‌ಲೈನ್ ಲಾಟರಿ ಕುರಿತು ಸರ್ಕಾರ ದಾರಿತಪ್ಪಿಸುವ ತಂತ್ರ ಅನುಸರಿಸುತ್ತಿದೆ. ಲಾಟರಿ ನಿಷೇಧದ ಕುರಿತ ಸರ್ಕಾರದ ಮಾತು ಕಣ್ಣೊರೆಸುವ ತಂತ್ರ ಎಂದು ಸಭಾತ್ಯಾಗದ ಮುನ್ನ ಯಡಿಯೂರಪ್ಪ ಟೀಕಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications