ಈಗ 5734960 ; ಜ. 24ರ ಮಧ್ಯರಾತ್ರಿಯಿಂದ 25734960
ಈಗ 5734960 ; ಜ. 24ರ ಮಧ್ಯರಾತ್ರಿಯಿಂದ 25734960
ಬೆಂಗಳೂರಿನಲ್ಲಿನ ಬಿಎಸ್‌ಎನ್‌ಎಲ್ ಸ್ಥಿರ ದೂರವಾಣಿಗಳಿಗೆ ಬಡ್ತಿ !
ಉದಾ ಹೀಗಿದೆ ನೋಡಿ: ನಿಮ್ಮ ದೂರವಾಣಿಯ ಸಂಖ್ಯೆ 5734960 ಎಂದುಕೊಳ್ಳಿ; ಜ.24ರಿಂದ ಈ ಸಂಖ್ಯೆ 25734960 ಆಗಲಿದೆ. ಅಂದರೆ ಪ್ರತಿ ದೂರವಾಣಿ ಸಂಖ್ಯೆಯ ಹಿಂದೆ 2 ಸೇರಿಕೊಳ್ಳುತ್ತದೆ.
ರಾಷ್ಟ್ರೀಯ ಸಂಖ್ಯೆಗಳ ಯೋಜನೆಯಡಿ ಬೆಂಗಳೂರನ್ನು ತರುವ ಉದ್ದೇಶದಿಂದ ಬಿಎಸ್‌ಎನ್‌ಎಲ್ ಈ ಬದಲಾವಣೆಯನ್ನು ಮಾಡುತ್ತಿದೆ. ಈಗಾಗಲೇ ದೇಶದ ಪ್ರಮುಖ ಪಟ್ಟಣಗಳ ದೂರವಾಣಿ ಸಂಖ್ಯೆಗಳು 8 ಡಿಜಿಟ್‌ಗೇರಿದ್ದು , ಈಗ ಬೆಂಗಳೂರಿನ ಸರದಿ.
ಬೆಂಗಳೂರಿನಲ್ಲಿ ದೂರವಾಣಿಗಳ ಸಂಖ್ಯೆ ಈ ಮುನ್ನವೇ 8 ಡಿಜಿಟ್‌ಗೇರಬೇಕಿತ್ತು . ಆದರೆ, ತಾಂತ್ರಿಕ ತೊಂದರೆಯಿಂದಾಗಿ ಈ ಬದಲಾವಣೆ ಸ್ವಲ್ಪ ವಿಳಂಬವಾಯಿತು ಎಂದು ಬಿಎಸ್‌ಎನ್‌ಎಲ್ ಬೆಂಗಳೂರು ಟೆಲಿಕಾಂ ಸರ್ಕಲ್‌ನ ಪಿಜಿಎಂ ಬಿ.ಆರ್.ಬಾಳಿಗ ತಿಳಿಸಿದ್ದಾರೆ.
ಕೆಲವು ತಿಂಗಳುಗಳ ನಂತರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೂರವಾಣಿ ಸಂಖ್ಯೆಗಳನ್ನು ಕೂಡ 8 ಡಿಜಿಟ್‌ಗೇರಿಸುವ ಉದ್ದೇಶ ಬಿಎಸ್‌ಎನ್‌ಎಲ್‌ಗಿದೆ. ದೂರವಾಣಿ ಸೇವೆಗಳನ್ನು ಒದಗಿಸುವ ಕಂಪನಿಗಳನ್ನು ಸುಲಭವಾಗಿ ಗುರ್ತಿಸುವ ಉದ್ದೇೕಶದ ಸರ್ಕಾರದ ನೀತಿಗನುಗುಣವಾಗಿ ಈ ಬದಲಾವಣೆಗಳು ನಡೆಯುತ್ತಿವೆ. ಉದಾ- ಬಿಎಸ್‌ಎನ್‌ಎಲ್ ನಂಬರ್‌ಗಳು 2ರಿಂದ, ರಿಲಯನ್ಸ್ ನಂಬರ್‌ಗಳು 3 ರಿಂದ ಹಾಗೂ ಟಾಟಾ ನಂಬರ್‌ಗಳು 5ರಿಂದ ಪ್ರಾರಂಭವಾಗುತ್ತವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications