ಸೋಮವಾರದಿಂದ ಅಧಿವೇಶನ; ನಿವೃತ್ತರು ಹೊಸಬರ ಭರಾಟೆ !
ಸೋಮವಾರದಿಂದ ಅಧಿವೇಶನ; ನಿವೃತ್ತರು ಹೊಸಬರ ಭರಾಟೆ !
ಸದನದ ಮುಂದೆ ಐದು ಮಸೂದೆಗಳ ಮಂಡನೆಯ ನಿರೀಕ್ಷೆ
ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರ ಭಾಷಣದೊಂದಿಗೆ ವಿಧಾನಮಂಡಲ ಅಧಿವೇಶನ ಜ.5ರಿಂದ ಪ್ರಾರಂಭವಾಗುವುದು. ಈ ಅಧಿವೇಶನ ಜನವರಿ 14ರವರೆಗೂ ನಡೆಯಲಿದೆ ಎಂದು ವಿಧಾನಸಭೆ ಕಾರ್ಯದರ್ಶಿ ಟಿ.ರಾಜಣ್ಣ ತಿಳಿಸಿದ್ದಾರೆ.
ಪಂಚಾಯತ್ ರಾಜ್‌ಗೆ ತಿದ್ದುಪಡಿ ತರುವ ಮಸೂದೆಯೂ ಸೇರಿದಂತೆ ಐದು ಮಸೂದೆಗಳು ಸದನದ ಮುಂದೆ ಮಂಡನೆಯಾಗುವುದಾಗಿ ಸರ್ಕಾರ ನಿರೀಕ್ಷಿಸಿದೆ.
ಶಾಸಕರಿಗೆ ಬೀಳ್ಕೊಡುಗೆ : ವಿಧಾನ ಪರಿಷತ್ತಿನ 25 ಸದಸ್ಯರು ಜನವರಿ 5ರಂದು ನಿವೃತ್ತರಾಗುತ್ತಿದ್ದು , ಜ.5ರ ಅಧಿವೇಶನದಲ್ಲಿ , ರಾಜ್ಯಪಾಲರ ಭಾಷಣದ ನಂತರ ನಿವೃತ್ತ ಶಾಸಕರನ್ನು ಬೀಳ್ಕೊಡಲು ಸದನ ಸಭೆ ಸೇರಲಿದೆ. ನಿವೃತ್ತರಾಗುತ್ತಿರುವ ಶಾಸಕರ ಸ್ಥಾನವನ್ನು ನೂತನವಾಗಿ ಚುನಾಯಿತರಾಗಿರುವ 25 ಸದಸ್ಯರು ತುಂಬುತ್ತಿದ್ದು , ಜನವರಿ 5 ಮತ್ತು 6ರಂದು ಈ ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಪರಿಷತ್ತಿನ ಹೆಚ್ಚುವರಿ ಕಾರ್ಯದರ್ಶಿ ಜಯಶಂಕರ ಮೂರ್ತಿ ತಿಳಿಸಿದ್ದಾರೆ.
ಪ್ರಸ್ತುತ ವಿಧಾನ ಪರಿಷತ್ತಿನ ಬಲಾಬಲ :
ಒಟ್ಟು ಸ್ಥಾನ- 75. ಕಾಂಗ್ರೆಸ್ 42. ಬಿಜೆಪಿ 10. ಅಖಿಲ ಭಾರತ ಪ್ರಗತಿಪರ ಜನತಾದಳ 9. ಜಾತ್ಯತೀತ ಜನತಾದಳ 7. ಪಕ್ಷೇತರರು 3. ಅಧ್ಯಕ್ಷರು 1. ಉಳಿದ ಮೂರು ಸ್ಥಾನಗಳು ಖಾಲಿಯಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications