‘ರ್ಹೋಡ್ಸ್’ ಮೂಲಕ ಆಕ್ಸ್‌ಫರ್ಡ್‌ಗೆ ಇಬ್ಬರು ಬೆಂಗಳೂರಿಗರು
‘ರ್ಹೋಡ್ಸ್’ ಮೂಲಕ ಆಕ್ಸ್‌ಫರ್ಡ್‌ಗೆ ಇಬ್ಬರು ಬೆಂಗಳೂರಿಗರು
ಬೆಂಗಳೂರಿನ ಹೆಮ್ಮೆಯ ವಿದ್ಯಾರ್ಥಿಗಳ ಹೆಸರು- ಪೃಥ್ವಿರಾಜ ದತ್ತಾ ಮತ್ತು ತರುಣ ಕೇತನ್
ಪೃಥ್ವಿರಾಜ ದತ್ತಾ ಮತ್ತು ತರುಣ ಕೇತನ್ ಎನ್ನುವ ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ ವಿದ್ಯಾರ್ಥಿಗಳು 2004ನೇ ಸಾಲಿನ ರ್ಹೋಡ್ಸ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ. ಇಡೀ ದೇಶದಿಂದ 6 ಮಂದಿ ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದು , ಅದರಲ್ಲಿಬ್ಬರು ಬೆಂಗಳೂರಿನವರೆನ್ನುವುದು ವಿಶೇಷ.
ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಎರಡು ವರ್ಷಗಳ ಕಾಲ ಕಲಿಯುವ ಅವಕಾಶವನ್ನು ಪೃಥ್ವಿರಾಜ ದತ್ತಾ ಮತ್ತು ತುರುಣ ಕೇತನ್ ಪಡೆದಿದ್ದಾರೆ. ಈ ಅವಧಿಯಲ್ಲಿ ಎಲ್ಲ ವೆಚ್ಚವನ್ನೂ ರ್ಹೋಡ್ಸ್ ಟ್ರಸ್ಟಿಗಳು ಭರಿಸಲಿದ್ದು , ಆಕ್ಸ್‌ಫರ್ಡ್‌ನಲ್ಲಿನ ಕಲಿಕೆ ಇನ್ನೊಂದು ವರ್ಷ ವಿಸ್ತರಣೆಗೊಳ್ಳುವ ಸಾಧ್ಯತೆಯೂ ಇದೆ.
ಪೃಥ್ವಿರಾಜ್ ಅಂತರರಾಷ್ಟ್ರೀಯ ಕಾನೂನುಗಳ ಬಗ್ಗೆ ಅಧ್ಯಯನ ನಡೆಸುವ ಹಂಬಲ ಹೊಂದಿದ್ದರೆ, ತರುಣ ಕೇತನ್ ಮಾನವ ಹಕ್ಕು ಮತ್ತು ಸಾಂವಿಧಾನಿಕ ಕಾನೂನುಗಳ ಬಗೆಗಿನ ಅಧ್ಯಯನಕ್ಕೆ ಒಲವು ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications