34 ಪೋಲಿಯಾ ಪ್ರಕರಣ ಪತ್ತೆ ; ಜ.4ರಿಂದ ಪಲ್ಸ್ ಪೋಲಿಯಾ !
34 ಪೋಲಿಯಾ ಪ್ರಕರಣ ಪತ್ತೆ ; ಜ.4ರಿಂದ ಪಲ್ಸ್ ಪೋಲಿಯಾ !
2005ರ ಅಂತ್ಯದೊಳಗೆ ಪೋಲಿಯಾ ನಿರ್ಮೂಲಗೊಳಿಸಲು ರಾಜ್ಯ ಸರ್ಕಾರದ ಸಂಕಲ್ಪ
ಐದು ಸುತ್ತುಗಳ ಪಲ್ಸ್ ಪೋಲಿಯಾ ಕಾರ್ಯಕ್ರಮ ಜ.4ರ ಭಾನುವಾರದಿಂದ ಪ್ರಾರಂಭವಾಗುತ್ತಿದ್ದು , ಸುಮಾರು 1.3 ಲಕ್ಷ ಮಂದಿ ಈ ಆಂದೋಲನದಲ್ಲಿ ಭಾಗವಹಿಸುವರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಜನವರಿ 4 ರಂದು ಪ್ರಥಮ ಸುತ್ತು , ಉಳಿದಂತೆ- ಫೆಬ್ರವರಿ 22 ರಂದು ಹಾಗೂ ಏಪ್ರಿಲ್, ಅಕ್ಟೋಬರ್, ನವಂಬರ್ ತಿಂಗಳ ನಿಗದಿತ ದಿನಾಂಕಗಳಂದು ಪಲ್ಸ್ ಪೋಲಿಯಾ ಆಂದೋಲನ ನಡೆಯಲಿದೆ. ಈ ಆಂದೋಲನದಲ್ಲಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಪೋಲಿಯಾ ಲಸಿಕೆ ಹಾಕಲಾಗುವುದು ಎಂದು ಸಚಿವ ತಿಮ್ಮಪ್ಪ ಹೇಳಿದರು.
2002-2003ರಲ್ಲಿಯೇ ಪೋಲಿಯಾ ಮುಕ್ತ ಕರ್ನಾಟಕ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು . ಆದರೆ 2003ನೇ ಇಸವಿಯಲ್ಲಿ ಕನಿಷ್ಠ 34 ಪೋಲಿಯಾ ಪ್ರಕರಣಗಳು ಬಳ್ಳಾರಿ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಗುಲ್ಬರ್ಗಾ ಮತ್ತು ಕೊಪ್ಪಳಗಳಲ್ಲಿ ಪತ್ತೆಯಾಗಿವೆ. ಮೊದಲ ಪೋಲಿಯಾ ಪ್ರಕರಣ ಬಳ್ಳಾರಿಯಲ್ಲಿ ವರದಿಯಾಗಿದ್ದು , ವೈರಸ್ ತಗುಲಿದ ಮಗುವಿನ ಕುಟುಂಬ ಮೀರತ್‌ನಿಂದ ಬಳ್ಳಾರಿಗೆ ವಲಸೆ ಬಂದಿತ್ತು ಎಂದು ತಿಮ್ಮಪ್ಪ ತಿಳಿಸಿದರು.
2005 ಡಿಸೆಂಬರ್ ಅಂತ್ಯದೊಳಗೆ ರಾಜ್ಯವನ್ನು ಪೋಲಿಯಾ ಮುಕ್ತಗೊಳಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿರುವುದಾಗಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications