ಹಾರುವ ಬಾರಾಬಾರಾ: ಇದು 2007ರ ಸೂಪರ್‌ಸಾನಿಕ್ ಹಾಡು
ಹಾರುವ ಬಾರಾಬಾರಾ: ಇದು 2007ರ ಸೂಪರ್‌ಸಾನಿಕ್ ಹಾಡು
ಹಾರಾಟದ ವೇಗದಲ್ಲಿ ಹಲವು ಗಂಟೆಗಳ ಉಳಿತಾಯ
2007 ರೊಳಗೆ ಸೂಪರ್ ಸಾನಿಕ್ ವಿಮಾನಗಳನ್ನು ಬಾನಲ್ಲಿ ಹಾರಿಸುವ ಗುರಿಯನ್ನು ನಮ್ಮ ವಿಜ್ಞಾನಿಗಳು ಹೊಂದಿದ್ದಾರೆ. ಅತ್ಯಂತ ಕಡಿಮೆ ಇಂಧನ ಬಳಕೆಯ ಈ ವಿಮಾನಗಳು ಇತರ ಸಮರ ವಿಮಾನಗಳಿಗಿಂತ ಮುಪ್ಪಟ್ಟು ವೇಗವನ್ನು ಹೊಂದಿರುತ್ತವೆ. ಇಂಜಿನ್ನಿನ ಪ್ರಾಥಮಿಕ ಪ್ರಯೋಗಗಳು ಮುಂದಿನ ವರ್ಷ ನಡೆಯಲಿವೆ ಎಂದು ಡಿಆರ್‌ಡಿಎಲ್ (Defence Research and Development Laboratory) ನಿರ್ದೇಶಕ ಪ್ರಹ್ಲಾದ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸೂಪರ್‌ಸಾನಿಕ್ ವಿಮಾನಗಳು ಮಾನವ ರಹಿತವಾಗಿರುತ್ತವೆ. ಕಂಪ್ರೆಸ್ಸರ್ ಹಾಗೂ ಟರ್ಬೈನ್ ಹೊಂದಿರದ ಈ ವಿಮಾನದ ಇಂಜಿನ್‌ಗಳು ಅತ್ಯಂತ ಹಗುರವಾಗಿರುವುದರಿಂದ ಹಾರಾಟದ ವೇಗ ಹಲವು ಗಂಟೆಗಳಷ್ಟು ಸುಧಾರಣೆಯಾಗಲಿದೆ. ಈ ರೀತಿಯ ಇಂಜಿನ್ ತಯಾರಿಕೆಯ ತಂತ್ರಜ್ಞಾನದಲ್ಲಿ ಭಾರತ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ ಎಂದು ಪ್ರಹ್ಲಾದ್ ಹೇಳಿದರು.
ಸೂಪರ್‌ಸಾನಿಕ್ ವಿಮಾನ ತಯಾರಿಕೆಯಲ್ಲಿ ಭಾರತ- ಚೀನಾ, ಜಪಾನ್, ಅಮೇರಿಕಾ ಹಾಗೂ ರಷ್ಯಾಳೊಂದಿಗೆ ಸ್ಪರ್ಧೆಯಲ್ಲಿದೆ. ಈ ವಿಮಾನಗಳಿಂದಾಗಿ ವಾಯುಯಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗುತ್ತವೆ ಎಂದು ಪ್ರಹ್ಲಾದ್ ತಿಳಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications