ಮಂಡ್ಯ ವೈದ್ಯರ ಮನೆಯಲ್ಲಿ 8 ಲಕ್ಷ ಬೆಲೆಯ ನಗ-ನಗದು ಲೂಟಿ

ಮಂಡ್ಯ ವೈದ್ಯರ ಮನೆಯಲ್ಲಿ 8 ಲಕ್ಷ ಬೆಲೆಯ ನಗ-ನಗದು ಲೂಟಿ
ಡಕಾಯಿತರು ಸುಮಾರು ಎರಡು ತಾಸು ಮನೆಯಲ್ಲೇ ತಂಗಿದ್ದರು

ಮಂಡ್ಯ : ಸಶಸ್ತ್ರ ದರೋಡೆಕೋರರು ಇಲ್ಲಿನ ಜನನಿಬಿಡ ಪ್ರದೇಶದಲ್ಲಿರುವ ವೈದ್ಯರ ಮನೆಯಾಂದಕ್ಕೆ ಶುಕ್ರವಾರ ಬೆಳಗಿನ ಜಾವ ನುಗ್ಗಿ, ಮನೆಯವರನ್ನು ಬೆದರಿಸಿ ಸುಮಾರು 8 ಲಕ್ಷ ರುಪಾಯಿ ಬೆಲೆಯ ಚಿನ್ನ ಹಾಗೂ ನಗದು ದೋಚಿ ಪರಾರಿಯಾಗಿದ್ದಾರೆ.

ಅಶೋಕನಗರದ ಬಾಲಭವನದ ಬಳಿ ಇರುವ ದಿವಂಗತ ವೈದ್ಯ ಮಾರೀಕಾಳಯ್ಯ ಅವರ ಮನೆಗೆ ಐವರು ದರೋಡೆಕೋರರಿದ್ದ ತಂಡ ನುಗ್ಗಿ, ಎಲ್ಲರ ಕತ್ತಿನ ಮೇಲೆ ಚಾಕು ಇರಿಸಿ ಬೆದರಿಸಿ ಕೃತ್ಯ ಎಸಗಿದೆ. ಸುಮಾರು ಎರಡು ತಾಸು ಕಾಲ ಡಕಾಯಿತರು ಮನೆಯಲ್ಲಿದ್ದರು. 7 ಲಕ್ಷ ರುಪಾಯಿ ಬೆಲೆಯ ಚಿನ್ನ, 84 ಸಾವಿರ ರುಪಾಯಿ ಮತ್ತು 300 ಅಮೆರಿಕನ್‌ ಡಾಲರ್‌ ನಗದನ್ನು ತಂಡ ದೋಚಿದೆ. ಮನೆಯವರ ಪ್ರಕಾರ- ಡಕಾಯಿತರು ರೈಲ್ವೆ ನಿಲ್ದಾಣದ ಕಡೆ ಓಡಿಹೋಗಿದ್ದಾರೆ. ಅವರೆಲ್ಲ ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಮಾತಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಡಕಾಯಿತರಿಗಾಗಿ ತೀವ್ರ ಶೋಧ ನಡೆದಿದೆ. ಈ ಭಾರೀ ಡಕಾಯಿತಿ ಪ್ರಕರಣದಿಂದ ಮಂಡ್ಯ ನಗರಿ ತಲ್ಲಣಗೊಂಡಿದೆ.

(ಪಿಟಿಐ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+