ಭಾರತದಲ್ಲಿ ‘ವೋಟಿಗೆ ಗಾಳ’ ಇ-ಮೇಲ್, ಮೊಬೈಲ್‌ಗೂ ಬಂತು
ಭಾರತದಲ್ಲಿ ‘ವೋಟಿಗೆ ಗಾಳ’ ಇ-ಮೇಲ್, ಮೊಬೈಲ್‌ಗೂ ಬಂತು
ದೆಹಲಿ ವಿಧಾನಸಭಾ ಚುನಾವಣೆಗೆ ಹೈಟೆಕ್ ಪ್ರಚಾರ
ರಾಜಧಾನಿ ದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಜೋರು ಪ್ರಚಾರ ಪೋಟಿ ನಡೆಸಿವೆ. ಸೆಲ್‌ಫೋನಿನಲ್ಲಿ ಎಸ್‌ಎಂಎಸ್ ಜೊತೆಗೆ ತಂತಮ್ಮ ಪಕ್ಷಗಳ ಚಿಹ್ನೆಗಳನ್ನು ವಾಲ್‌ಪೇಪರ್ ಆಗಿ ಹಾಕಿಕೊಳ್ಳಿ ಎಂಬ ಪುಕ್ಕಟೆ ಪುಗ್ಗ ಬೇರೆ ಹರಿದು ಬರುತ್ತಿವೆ.
ಕಳೆದ ಐದು ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿರುವ ಶೀಲಾ ದೀಕ್ಷಿತ್ ಪರವಾದ ಪ್ರಚಾರ ಸಂದೇಶ ಹೀಗಿದೆ- ‘ಜನ್ ಜನ್ ಸೆ ನಾತಾ ಹೈ, ಸರ್ಕಾರ್ ಚಲ್‌ನಾ ಆತಾ ಹೈ’. ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಇ- ಪರಿಯ ಪ್ರಚಾರ ಶುರುವಾಗಿದೆ. ಹೈಟೆಕ್ ಸ್ಲೋಗನ್ನುಗಳನ್ನು ಬರೆಯುವವರಿಗೂ ಬೇಡಿಕೆ ಹೆಚ್ಚಿದೆ. ಆದರೆ ಮೊಬೈಲ್ ಕಂಪನಿಗಳಿಗೆ ಇದು ತಲೆನೋವಾಗಿದೆ. ಚುನಾವಣಾ ಪ್ರಚಾರದ ಎಸ್‌ಎಂಎಸ್‌ಗಳಿಂದ ಬೇಸತ್ತಿರುವ ಕೆಲವು ಗಿರಾಕಿಗಳು ಅಂತಾ ಸಂದೇಶ ಬರದಂತೆ ಮಾಡಿರೆಂದು ಮೊಬೈಲ್ ಕಂಪನಿಗಳಿಗೆ ದುಂಬಾಲು ಬೀಳುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications