ಭಾರತವಿರುದ್ಧ ಟೆಸ್ಟ್ ಸರಣಿ ನಂತರ ಕ್ರಿಕೆಟ್‌ಗೆ ಸ್ಟೀವ್‌ವಾ ವಿದಾಯ
ಭಾರತವಿರುದ್ಧ ಟೆಸ್ಟ್ ಸರಣಿ ನಂತರ ಕ್ರಿಕೆಟ್‌ಗೆ ಸ್ಟೀವ್‌ವಾ ವಿದಾಯ
ಆಸ್ಟ್ರೇಲಿಯಾಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಜಯದ ಸರಮಾಲೆ ತೊಡಿಸಿದ ನಾಯಕನ ಗುಡ್‌ಬೈ
ಬುಧವಾರ (ನ. 26) ಆಸ್ಟ್ರೇಲಿಯಾದ ಟೀವಿ ಚಾನೆಲ್ಲುಗಳಲ್ಲಿ ನೇರ ಪ್ರಸಾರ ಮಾಡಲಾದ ಸುದ್ದಿಗೋಷ್ಠಿಯಲ್ಲಿ ವಾ ಈ ವಿಷಯ ಪ್ರಕಟಿಸಿದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಸ್ಟೀವ್ ವಾ ತಮ್ಮ ನಿವೃತ್ತಿಯ ವಿಷಯವನ್ನು ಬಹಿರಂಗಪಡಿಸಿದರು.
ಜನವರಿ 2ನೇ ತಾರೀಕು ಶುರುವಾಗುವ ಭಾರತದ ವಿರುದ್ಧದ ಕೊನೆಯ ಟೆಸ್ಟ್ ನನ್ನ ಜೀವಮಾನದ ಕೊನೆಯ ಆಟವೂ ಹೌದು. ಆ ಟೆಸ್ಟ್‌ವರೆಗೆ ನನ್ನ ಹಸಿರು ಬ್ಯಾಗಿ ಟೋಪಿ ತಲೆಯ ಮೇಲಿರುತ್ತದೆ. ಒಳ್ಳೆಯ ಕೆಲಸಗಳು ಒಂದಲ್ಲ ಒಂದು ದಿನ ಮುಗಿಯಲೇಬೇಕು ಎಂದಷ್ಟೇ ವಾ ಹೇಳಿದರು.
ಸ್ಟೀವ್ ವಾ ನಾಯಕತ್ವದ ಜಾಗಕ್ಕೆ ಒಂದು ದಿನದ ತಂಡದ ನಾಯಕ ರಿಕಿ ಪಾಂಟಿಂಗ್‌ರನ್ನೇ ಕೂರಿಸಬೇಕೋ ಬೇಡವೋ ಎಂಬ ವಿಷಯದಲ್ಲಿ ಜಿಜ್ಞಾಸೆ ಇದ್ದು, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications