ಬಿಎಂಟಿಸಿ : ಡಿ.25ರಿಂದ ಹವಾನಿಯಂತ್ರಿತ ‘ಶೀತಲ್’ ಬಸ್‌ಗಳು
ಬಿಎಂಟಿಸಿ : ಡಿ.25ರಿಂದ ಹವಾನಿಯಂತ್ರಿತ ‘ಶೀತಲ್’ ಬಸ್‌ಗಳು
ಶ್ರೀಮಂತ ಪ್ರಯಾಣಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಗಾಳ
ಡಿಸೆಂಬರ್ 25ರಿಂದ ಬಿಎಂಟಿಸಿ ‘ಶೀತಲ್’ ಎನ್ನುವ ಹೆಸರಿನ ಹವಾ ನಿಯಂತ್ರಿತ ಬಸ್‌ಗಳ ಸಂಚಾರ ಆರಂಭಿಸಲಿದೆ ಎಂದು ಬಿಎಂಟಿಸಿಯ ವ್ಯವಸ್ಥಪಕ ನಿರ್ದೇಶಕ ಉಪೇಂದ್ರ ತ್ರಿಪಾಠಿ ತಿಳಿಸಿದ್ದಾರೆ. ಪ್ರಯಾಣಿಕರಿಗೆ ಉತ್ತಮ ಸವಲತ್ತು ಕಲ್ಪಿಸುವ ಹಿನ್ನೆಲೆಯಲ್ಲಿ ಹವಾ ನಿಯಂತ್ರಿತ ಬಸ್ಸುಗಳ ಸೇವೆ ಕಲ್ಪಿಸಲಾಗಿದೆ ಎಂದು ತ್ರಿಪಾಠಿ ಹೇಳಿದರು.
ಬೆಳಗ್ಗೆ 8ರಿಂದ 11 ಹಾಗೂ ಸಂಜೆ 4ರಿಂದ 7 ಗಂಟೆಯ ಅವಧಿಯಲ್ಲಿ ಹವಾ ನಿಯಂತ್ರಿತ ಬಸ್ಸುಗಳು ಸಂಚರಿಸಲಿವೆ. ಪ್ರಾರಂಭಿಕ ಹಂತದಲ್ಲಿ 20 ಬಸ್‌ಗಳನ್ನು ಓಡಿಸಲಾಗುತ್ತಿದ್ದು , ಪ್ರತಿಕ್ರಿಯೆ ಉತ್ತಮವಾಗಿದ್ದಲ್ಲಿ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು. ಪ್ರತಿ ಟ್ರಿಪ್‌ಗೆ 15 ರುಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ. ಹವಾ ನಿಯಂತ್ರಿತ ಬಸ್‌ಗಳ ಮಾರ್ಗಗಳನ್ನು ಇನ್ನೂ ಗುರ್ತಿಸಲಾಗಿಲ್ಲ ಎಂದು ತ್ರಿಪಾಠಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ












Click it and Unblock the Notifications