ಇಗ್ನೋ ಮಡಿಲಿಗೆ ಜಗತ್ತಿನ ದೊಡ್ಡ ವಿಶ್ವವಿದ್ಯಾಲಯ ಎಂಬ ಅಗ್ಗಳಿಕೆ

ಇಗ್ನೋ ಮಡಿಲಿಗೆ ಜಗತ್ತಿನ ದೊಡ್ಡ ವಿಶ್ವವಿದ್ಯಾಲಯ ಎಂಬ ಅಗ್ಗಳಿಕೆ
ಹತ್ತು ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆ -ಇಗ್ನೋ

ಬೆಂಗಳೂರು : ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (ಇಗ್ನೋ) ಜಗತ್ತಿನ ಅತಿ ದೊಡ್ಡ ವಿಶ್ವ ವಿದ್ಯಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ.

ಇಗ್ನೋ ಮುಕ್ತ ವಿವಿಯ ಮೂಲಕ ಸುಮಾರು ಹತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುತ್ತಿದೆ. ಚೀನಾದ ಶಾಂಘೖನಲ್ಲಿ ಇತ್ತೀಚೆಗೆ ನಡೆದ ವಿಶ್ವವಿದ್ಯಾಲಯಗಳ ಕುಲಪತಿಗಳ ಸಮ್ಮೇಳನದಲ್ಲಿ ಇಗ್ನೋವನ್ನು ವಿಶ್ವದ ಅತೀ ದೊಡ್ಡ ವಿವಿ ಎಂದು ಘೂೕೕಷಿಸಲಾಯಿತು. ಈ ಸಮ್ಮೇಳನವನ್ನು ಯುನೆಸ್ಕೋ ಪ್ರಾಯೋಜಿಸಿತ್ತು.

ಈವರೆಗೆ ಚೀನಾದ ಬಾನುಲಿ ಮತ್ತು ದೂರದರ್ಶನ ವಿಶ್ವವಿದ್ಯಾಲಯವನ್ನು ವಿಶ್ವದ ಅತಿ ದೊಡ್ಡ ವಿವಿ ಎಂದು ಪರಿಗಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನ್ಯಾಷನಲ್‌ ಕಮಿಷನ್‌ ಆಫ್‌ ಯುನೆಸ್ಕೋ ಹಾಗೂ ಗ್ಲೋಬಲ್‌ ಮೆಗಾ ಯೂನಿವರ್ಸಿಟಿ ನೆಟ್‌ ಕಚೇರಿಯನ್ನು ಮುಂದಿನ ವರ್ಷದ ನವೆಂಬರ್‌ನಲ್ಲಿ ಸದ್ಯದಲ್ಲೇ ಭಾರತಕ್ಕೆ ವರ್ಗಾಯಿಸಲಾಗುವುದು. ಈ ಕಚೇರಿಯ ಅಧ್ಯಕ್ಷರಾಗಿ ಇಗ್ನೋ ಕುಲಪತಿ ಡಾ. ಎಚ್‌. ಪಿ. ದೀಕ್ಷಿತ್‌ ಅವರು ಕಾರ್ಯನಿರ್ವಹಿಸುವರು ಎಂದು ಇಗ್ನೋ ಪ್ರಾಂತೀಯ ನಿರ್ದೇಶಕ ಡಾ. ಬಿ. ಪಿ. ಆರ್‌. ನರಸಿಂಹ ರಾವ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+