ತೇಜಸ್ವಿಯ ಪರಿಸರದ ಕತೆಗಳು ಇಂಗ್ಲಿಷ್‌ಗೆ
ತೇಜಸ್ವಿಯ ಪರಿಸರದ ಕತೆಗಳು ಇಂಗ್ಲಿಷ್‌ಗೆ
ಸ್ಟೋರಿ ಆಫ್ ಮೈ ಎನ್ವಿರಾನ್‌ಮೆಂಟ್ ಪುಸ್ತಕದ ಮೂಲಕ ಹೆಚ್ಚು ಓದುಗರ ಬಳಿಗೆ ತೇಜಸ್ವಿ ಕತೆಗಳು
‘ಸ್ಟೋರಿ ಆಫ್ ಮೈ ಎನ್ವಿರಾನ್‌ಮೆಂಟ್’ ಎಂಬ ಶೀರ್ಷಿಕೆಯ ಈ ಪುಸ್ತಕವನ್ನು ಪ್ರುಸ್ತಕ ಪ್ರಕಾಶನ ಪ್ರಕಟಿಸಿದೆ. ಪ್ರಜಾವಾಣಿ ಪತ್ರಿಕೆ ಬಳಗದ ಸಹ ನಿರ್ವಹಣಾ ನಿರ್ದೇಶಕ ಕೆ. ಎನ್. ಕುಮಾರ್ , ಬುಧವಾರ ನಡೆದ ಸರಳ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿದರು.
ಸಮಾರಂಭದಲ್ಲಿ ಮಾತನಾಡಿದ ಅನುವಾದಕ ಶ್ರೀನಿವಾಸ ಗೌಡ ಅವರು, ಪರಿಸರದ ಕತೆಗಳು ಪುಸ್ತಕದಲ್ಲಿರುವ ಎಲ್ಲಾ ಹದಿನೈದು ಕತೆಗಳನ್ನೂ ಇಂಗ್ಲಿಷ್‌ಗೆ ಅನುವಾದಿಸಲಾಗಿದೆ ಎಂದರು. ತೇಜಸ್ವಿಯವರದು ಸರಳ ಶೈಲಿ. ಅವರ ಬರಹಗಳು ಸಂಭಾಷಣೆ/ ಧಾಟಿಯಲ್ಲಿರುತ್ತವೆ. ಅಲ್ಲಿ ಜಾಣ್ಮೆಗೆ ಹೆಚ್ಚು ಮಹತ್ವ. ಅವರ ಕತೆಗಳಲ್ಲಿ ಪರಿಸರ ಒಂದು ಪಾತ್ರವಾಗಿಯೇ ಕಾಣಿಸಿಕೊಳ್ಳುತ್ತದೆ. ತೇಜಸ್ವಿಯರ ಈ ಶೈಲಿಯಿಂದಾಗಿಯೇ ಅವರ ಪರಿಸರದ ಕತೆಗಳು ಪುಸ್ತಕದ ಅನುವಾದವನ್ನು ಕೈಗೆತ್ತಿಕೊಂಡೆ ಎಂದು ಶ್ರೀನಿವಾಸ ಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ದಕ್ಷಿಣ ವಿಭಾಗದ ಕಾರ್ಯದರ್ಶಿ ಅಗ್ರಹಾರ ಕೃಷ್ಣ ಮೂರ್ತಿ, ತೇಜಸ್ವಿಯವರು ಸಾಮಾನ್ಯ ಮನುಷ್ಯನ ಜೀವನಾನುಭವಗಳನ್ನು ಸುಂದರವಾಗಿ ಕಟ್ಟಿಕೊಡುತ್ತಾರೆ. ತೇಜಸ್ವಿ ಕತೆಗಳು ಇಂಗ್ಲಿಷ್‌ಗೆ ಅನುವಾದಗೊಂಡಿರುವುದರಿಂದ ತೇಜಸ್ವಿಯವರ ಸಾಹಿತ್ಯ ಹೆಚ್ಚು ಜನ ಓದುಗರಿಗೆ ಲಭ್ಯವಾಗಲಿದೆ ಎಂದ ಅಗ್ರಹಾರ- ಅನುವಾದಕ ಶ್ರೀನಿವಾಸ ಗೌಡರ ಪ್ರಯತ್ನವನ್ನು ಶ್ಲಾಘಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications