ಚಲನ ಚಿತ್ರವಾಗಿ ತೆರೆ ಕಾಣಲಿರುವ ಗ್ರಾಹಂ ಸ್ಟೇನ್ಸ್ ಜೀವನ ಚರಿತ್ರೆ
ಚಲನ ಚಿತ್ರವಾಗಿ ತೆರೆ ಕಾಣಲಿರುವ ಗ್ರಾಹಂ ಸ್ಟೇನ್ಸ್ ಜೀವನ ಚರಿತ್ರೆ
ಧಾರಾ ಸಿಂಗ್ ಪಾತ್ರದಲ್ಲಿ ಇರ್ಫಾನ್ ಖಾನ್
ಮರ್ಡರ್ ಆಫ್ ಎ ಮಿಶನರಿ ಎಂಬ ಚಲನ ಚಿತ್ರವು ಬರುವ ಫೆಬ್ರವರಿಯಲ್ಲಿ ತೆರೆ ಕಾಣುವ ನಿರೀಕ್ಷೆಯಿದೆ. ಸುನೀಲ್ ಅಗ್ನಿ ಹೋತ್ರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಚಿತ್ರವು ಹಿಂದೂ ಹಾಗೂ ಕ್ರಿಶ್ಚಿಯನ್ ಕೋಮುಗಳಲ್ಲಿ ಭಾರೀ ಸಂಚಲನೆ ಹುಟ್ಟಿಸುವ ಸಾಧ್ಯತೆ ಇದೆ.
ಚಿತ್ರ ನಿರ್ಮಾಣಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದ್ದು , ಚಿತ್ರದ ಕುರಿತಂತೆ ಗ್ರಾಹಂ ಸ್ಟೇನ್ಸ್ ಪತ್ನಿಯ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ ಎಂದು ಸುನೀಲ್ ಅಗ್ನಿ ಹೋತ್ರಿ ಹೇಳಿದ್ದಾರೆ.
ಗ್ರಾಹಂ ಕುಟುಂಬದ ಪಾತ್ರಗಳನ್ನು ವಿದೇಶೀ ನಟರು ನಿರ್ವಹಸಲಿದ್ದಾರೆ. ಆದರೆ ಧಾರಾಸಿಂಗ್ ಪಾತ್ರವನ್ನು ಭಾರತೀಯ ನಟ ಇರ್ಫಾನ್ ಖಾನ್ ಆಯ್ಕೆಯಾಗುವ ಸಾಧ್ಯತೆ ಇದೆ. ಹತ್ಯೆ ಕುರಿತಂತೆ ಯಾವುದೇ ವಿವಾದಕ್ಕೆ ಎಡೆ ಮಾಡಿಕೊಡುವುದಿಲ್ಲ. ಯಾಕೆಂದರೆ ಈ ಚಿತ್ರವನ್ನು ಮಾಧ್ಯಮ ವರದಿಗಳ ಆಧಾರದ ಮೇಲೆ ಹಾಗೂ ಗ್ರಾಹಂ ಪತ್ನಿ ನೀಡುವ ಮಾಹಿತಿಗಳ ಮೇಲೆ ತಯಾರಿಸಲಾಗುತ್ತದೆ ಎಂದು ಸುನೀಲ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications