‘ಐಎಫ್‌ಎಫ್‌ಐ’ ಗೆ ಬಂದಿದ್ದ ಸ್ವೀಡನ್ ಹುಡುಗಿಯ ಮಾನಭಂಗ
‘ಐಎಫ್‌ಎಫ್‌ಐ’ ಗೆ ಬಂದಿದ್ದ ಸ್ವೀಡನ್ ಹುಡುಗಿಯ ಮಾನಭಂಗ
ದೆಹಲಿಯಲ್ಲಿ ಮಾನಭಂಗ ಪ್ರಕರಣಗಳು ಎಷ್ಟೊಂದು ಸಲೀಸಾಗಿ ಸಾಗಿವೆಯೆಂದರೆ...
ರಾತ್ರಿ 10.45ಕ್ಕೆ ಸಿನಿಮಾ ನೋಡಿಕೊಂಡು ಸಭಾಂಗಣದಿಂದ ಹೊರಬಂದ ಇಲ್ಲಿನ ಸ್ವೀಡನ್ ರಾಯಭಾರಿ ಕಚೇರಿ ಅಧಿಕಾರಿಯ ಬಂಧು ಎನ್ನಲಾದ ಹುಡುಗಿಯನ್ನು ಇಬ್ಬರು ಕ್ಯಾಲಿಸ್ ವಾಹನಕ್ಕೆ ಬಲವಂತವಾಗಿ ಎಳೆದು, ತುರುಕಿಕೊಂಡಿದ್ದಾರೆ. ಆಮೇಲೆ ಕ್ಯಾಲಿಸ್ ಮಿಂಚಿನ ವೇಗದಲ್ಲಿ ಅಲ್ಲಿಂದ ನುಗ್ಗಿದೆ. ಕೊನೆಗೆ ಸಫ್ದರ್‌ಜಂಗ್ ಪ್ರದೇಶದಲ್ಲಿ ಹುಡುಗಿಯ ಚೀತ್ಕಾರ ನಡು ರಾತ್ರಿಯಲ್ಲಿ ಕೇಳಿಸಿದೆ. ಪೊಲೀಸರು ಆಕೆಯನ್ನು ತಲುಪುವ ಹೊತ್ತಿಗೆ ಇಬ್ಬರಿಂದ ಮಾನಭಂಗ ನಡೆದುಹೋಗಿದೆ.
ಹುಡುಗಿಯ ಆರೋಗ್ಯ ಸ್ಥಿರವಾಗಿಯೇನೋ ಇದೆ. ಆದರೆ ಪದೇಪದೇ ಮಾನಭಂಗ ನಡೆಸಿರುವುದರಿಂದ ಆಕೆಯ ಮನಸ್ಸಿಗೆ ಆಘಾತವಾಗಿದೆ. ಆಕೆಯ ಈ ಸ್ಥಿತಿಗೆ ಕಾರಣರಾದವರನ್ನು ಪತ್ತೆ ಮಾಡಲು ಪೊಲೀಸರು ವಿಚಾರಣೆ ಪ್ರಾರಂಭಿಸಿದ್ದಾರೆ. ವೈದ್ಯಕೀಯ ಪರೀಕ್ಷೆಗಳೂ ನಡೆದಿವೆ.
ದೆಹಲಿಯಲ್ಲಿ ಇತ್ತೀಚೆಗೆ ಮಾನಭಂಗ ಪ್ರಕರಣಗಳು ರಾಜಾರೋಷವಾಗಿ ನಡೆಯುತ್ತಿವೆ. ಬುದ್ಧ ಜಯಂತಿ ಪಾರ್ಕ್‌ನಲ್ಲಿ ಇತ್ತೀಚೆಗೆ ಹಾಡಹಗಲೇ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅತ್ಯಾಚಾರಕ್ಕೊಳಗಾಗಿದ್ದಳು. ರಾಷ್ಟ್ರಪತಿಯ ಭದ್ರತಾ ಸಿಬ್ಬಂದಿಯೇ ಆ ಕೃತ್ಯ ಎಸಗಿದ್ದಾರೆ ಎಂಬ ಆರೋಪವಿದ್ದು, ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸ್ವೀಡಿಷ್ ಹುಡುಗಿಯ ಮಾನಭಂಗ ಪ್ರಕರಣದ ನಂತರ 34ನೇ ಐಎಫ್‌ಎಫ್‌ಐ ನಡೆಯುತ್ತಿರುವ ಜಾಗೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಈ ಸಲ ಐಎಫ್‌ಎಫ್‌ಐಗೆ ಸಾಕಷ್ಟು ಕೆಟ್ಟ ಹೆಸರು ಬಂದಿದ್ದು, ಈ ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು












Click it and Unblock the Notifications