ಕ್ಯಾಲಿಫೋರ್ನಿಯ ಗವರ್ನರ್‌ ಸ್ಪರ್ಧೆಯಲ್ಲಿ ಗೆದ್ದ ‘ಶಿವಾಜಿನಗರ್‌’

ಕ್ಯಾಲಿಫೋರ್ನಿಯ ಗವರ್ನರ್‌ ಸ್ಪರ್ಧೆಯಲ್ಲಿ ಗೆದ್ದ ‘ಶಿವಾಜಿನಗರ್‌’
ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ‘ಶಿವಾಜಿನಗರ್‌’ ಜನಪ್ರಿಯತೆಗೆ ಸಂದ ಗೆಲುವು

ಲಾಸ್‌ ಏಂಜಲಿಸ್‌ : ಜಿದ್ದಾಜಿದ್ದಿನ ಸ್ಪರ್ಧೆಯಿಂದಾಗಿ ಭಾರೀ ಕುತೂಹಲ ಮೂಡಿಸಿದ್ದ ಕ್ಯಾಲಿಫೋರ್ನಿಯ ಗವರ್ನರ್‌ ಸ್ಥಾನದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು , ಜನಪ್ರಿಯ ಹಾಲಿವುಡ್‌ ನಟ ‘ಶಿವಾಜಿನಗರ್‌’ ಅರ್ಥಾತ್‌ ಆರ್ನಾಲ್ಡ್‌ ಶ್ವಾಸನೇಗರ್‌ (Arnold Schwarzenegger) ಜಯಗಳಿಸಿದ್ದಾರೆ.

ಶ್ವಾಸನೇಗರ್‌ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಿದ್ದ ಗ್ರೇ ಡೇವಿಸ್‌ ಅವರು ಅಲ್ಪ ಅಂತರದಿಂದ ಶ್ವಾಸನೇಗರ್‌ ಅವರೆದುರು ಸೋಲುಂಡಿದ್ದಾರೆ. ಈ ಮೂಲಕ ಡೇವಿಸ್‌ ಅವರು ಕ್ಯಾಲಿಫೋರ್ನಿಯ ಗವರ್ನರ್‌ ಸ್ಥಾನವನ್ನು ತೆರವು ಮಾಡಿದ್ದು , ಈ ಸ್ಥಾನವನ್ನು ಆಸ್ಟ್ರಿಯಾ ಸಂಜಾತ 56 ವರ್ಷದ ಶ್ವಾಸನೇಗರ್‌ ತುಂಬುವರು.

Arnold Schwarzeneggerಶ್ವಾಸನೇಗರ್‌ ಸ್ಪರ್ಧೆಯಿಂದಾಗಿ ಕ್ಯಾಲಿಫೋರ್ನಿಯ ಗವರ್ನರ್‌ ಚುನಾವಣಾ ಕಣ ರಂಗೇರಿತ್ತು . ಕಳೆದ 30 ವರ್ಷಗಳಿಂದ ಹಾಲಿವುಡ್‌ ಚಿತ್ರಗಳಲ್ಲಿ ಮಿಂಚುತ್ತಿರುವ ಶ್ವಾಸನೇಗರ್‌ ಅಪಾರ ಜನಪ್ರಿಯತೆ ಗಳಿಸಿರುವ ನಟ.

ಚುನಾವಣಾ ಸ್ಪರ್ಧೆಯ ಆರಂಭದ ದಿನಗಳಲ್ಲಿ ಶ್ವಾಸನೇಗರ್‌ ಪ್ರಚಾರದಲ್ಲಿ ಮುಂದಿದ್ದರೂ, ಕೊನೆಯ ದಿನಗಳಲ್ಲಿ ಆತ ಪ್ರಬಲ ಪ್ರತಿರೋಧ ಎದುರಿಸಬೇಕಾಗಿತ್ತು . 16 ಮಹಿಳೆಯರು ಶ್ವಾಸನೇಗರ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ಪ್ರಕರಣ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು . ಕಳೆದ ವಾರ ಶ್ವಾಸನೇಗರ್‌ ಮಹಿಳೆಯರ ಕ್ಷಮೆ ಯಾಚಿಸಿದರೂ, ಮಹಿಳಾ ಮತದಾರರು ಶ್ವಾಸನೇಗರ್‌ ವಿರುದ್ಧ ನಿಲುವು ತಳೆದಿದ್ದರು. ಆದರೆ ಪುರುಷ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಮೆಚ್ಚಿನ ನಟನಿಗೆ ಓಟು ಚಲಾಯಿಸಿರುವುದರಿಂದ ಶ್ವಾಸನೇಗರ್‌ಗೆ ಗೆಲುವು ಸಾಧ್ಯವಾಗಿದೆ.

(ಏಜನ್ಸೀಸ್‌)

ಪೂರಕ ಓದಿಗೆ
ಚುನಾವಣೆ ಖರ್ಚಿಗಾಗಿ ಡೇಟಿಂಗ್‌ !
ಶಿವಾಜಿನಗರ್‌ ಗದ್ದಲ ಅಮೆರಿಕನ್ನಡದ ಧ್ಯಾನ !

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+