ಬಿಎಸ್ಸೆನ್ನೆಲ್‌ನಿಂದ ವಿದ್ಯಾರ್ಥಿ ಯೋಜನೆ ‘ಸ್ಟೂಡೆಂಟ್ ಪವರ್’
ಬಿಎಸ್ಸೆನ್ನೆಲ್‌ನಿಂದ ವಿದ್ಯಾರ್ಥಿ ಯೋಜನೆ ‘ಸ್ಟೂಡೆಂಟ್ ಪವರ್’
ವಿದ್ಯಾರ್ಥಿ ಮೊಬೈಲ್‌ಗೆ ಮಾಸಿಕ 99 ರೂ. ಬಾಡಿಗೆ
‘ಸ್ಟೂಡೆಂಟ್ ಪವರ್’ ಎಂಬ ಈ ಯೋಜನೆಯ ಮೊದಲ ಹಂತದಲ್ಲಿ ಪೋಸ್ಟ್ ಪೇಯ್ಡ್ ಸೇವೆಯನ್ನು ಆರಂಭಿಸಲಾಗುವುದು. 8ನೇ ತರಗತಿಯಿಂದ ಮೇಲ್ಪಟ್ಟ ವಿದ್ಯಾರ್ಥಿಗಳು ಯೋಜನೆಯ ವ್ಯಾಪ್ತಿಗೆ ಬರುತ್ತಾರೆ ಎಂದು ನಿಗಮದ ಬೆಂಗಳೂರು ವಲಯದ ಮೊಬೈಲ್ ಸೇವಾ ವಿಭಾಗದ ಪ್ರಧಾನ ವ್ಯವಸ್ಥಾಪಕ ಫರೂಕ್ ಅಮೀನ್ ತಿಳಿಸಿದ್ದಾರೆ.
ಪೋಷಕರು ತಮ್ಮ ಮಕ್ಕಳೊಂದಿಗೆ ಸಂಪರ್ಕ ಇರಿಸಿಕೊಳ್ಳಲು ಅನುಕೂಲವಾಗುವಂತೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಮಾಸಿಕ 99 ರೂ. ಬಾಡಿಗೆ, 15 ಸೆಕೆಂಡ್‌ಗಳ ಪಲ್ಸ್ ರೇಟ್ ಮತ್ತು ಪ್ರತಿ ಎಸ್‌ಎಂಎಸ್‌ಗೆ 60 ಪೈಸೆ ಶುಲ್ಕ ವಿಧಿಸಲಾಗುವುದು. ಈ ಸೌಲಭ್ಯ ಒಂದು ವರ್ಷಕ್ಕೆ ಸೀಮಿತವಾಗಿರುತ್ತದೆ. ನಂತರ ಸಂಪರ್ಕವನ್ನು 225 ಸ್ಕೀಂ ಆಗಿ ಪರಿವರ್ತಿಸಲಾಗುವುದು ಎಂದು ಅಮೀನ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications