ಅಮೆರಿಕ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ಯುವತಿಯರ ರೇಪ್‌!

ಅಮೆರಿಕ ಏರ್‌ಫೋರ್ಸ್‌ ಅಕಾಡೆಮಿಯಲ್ಲಿ ಯುವತಿಯರ ರೇಪ್‌!
ಇದು ಭದ್ರತಾ ಇಲಾಖೆಯ ಇನ್ಸ್‌ಪೆಕ್ಟರ್‌ ಜನರಲ್‌ ನಡೆಸಿರುವ ಸಮೀಕ್ಷೆ

ವಾಷಿಂಗ್ಟನ್‌ : ಅಮೆರಿಕಾದ ಏರ್‌ಫೋರ್ಸ್‌ ಅಕಾಡೆಮಿಯಿಂದ ಈ ವರ್ಷ ಪದವೀಧರರಾಗಿ ಹೊರಬಂದ ವಿದ್ಯಾರ್ಥಿನಿಯರ ಪೈಕಿ ಪ್ರತಿಶತ 12ರಷ್ಟು ಯುವತಿಯರು ಮಾನಭಂಗ ಅನುಭವಿಸಿದ್ದಾರೆ ಅಥವಾ ಅಂತಹ ಪ್ರಯತ್ನದಿಂದ ತಪ್ಪಿಸಿಕೊಂಡಿದ್ದಾರೆ.

ಭದ್ರತಾ ಇಲಾಖೆಯ ಇನ್ಸ್‌ಪೆಕ್ಟರ್‌ ಜನರಲ್‌ ನಡೆಸಿದ ಸಮೀಕ್ಷೆಯಿಂದ ಈ ವಿಷಯ ಬಯಲಾಗಿದೆ. ಕೋಲರ್ಯಾಡೋ ಸ್ಪ್ರಿಂಗ್ಸ್‌ನಲ್ಲಿರುವ ಅಕಾಡೆಮಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಓದಿರುವ ವಿದ್ಯಾರ್ಥಿನಿಯರ ಮೇಲಿನ ಮಾನಭಂಗದ ಪ್ರಕರಣಗಳು ಕ್ಯಾಂಪಸ್ಸಿನಿಂದ ಹೊರಗೆ ಗಾಳಿಯಾಡದಂತೆ ನಿಗಾ ಕೂಡ ವಹಿಸಲಾಗಿದೆ.

ಮೇ 2003ರಲ್ಲಿ ಇನ್ಸ್‌ಪೆಕ್ಟರ್‌ ಜನರಲ್‌ ಮಾಡಿದ ಸಮೀಕ್ಷೆಯಲ್ಲಿ ಒಂದು ಡಜನ್ನು ವಿದ್ಯಾರ್ಥಿನಿಯರು ಕ್ಯಾಂಪಸ್ಸಿನ ಮಾನಭಂಗದ ಗುಟ್ಟನ್ನು ರಟ್ಟು ಮಾಡಿದರು ಎಂದು ಅಮೆರಿಕೆಯ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

ಅಕಾಡೆಮಿಯ ಕಮಾಂಡೆಂಟ್‌ ಬ್ರಿಗೇಡಿಯರ್‌ ಜನರಲ್‌ ಜಾನಿ ವೀಡಾ ಈ ಸಮೀಕ್ಷೆಯ ವಿಷಯ ಗೊತ್ತಾಗುತ್ತಿದ್ದಂತೆ ಇಡೀ ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ಶಿಸ್ತು ಕಾಪಾಡುವಂತೆ ಮನವಿ ಮಾಡಿದ್ದಾರೆ. ಯುವತಿಯರನ್ನು ಮಾನಭಂಗ ಮಾಡುವಂಥ ಕೆಲಸಕ್ಕೆ ಇನ್ನುಮುಂದೆ ಭಾರೀ ದಂಡ ತೆರ ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಜಾನಿ ವೀಡಾ ಅವರು ಈ ರೀತಿ ಹೇಳಲು ಇನ್ನೂ ಒಂದು ಕಾರಣವಿದೆ. ಕಳೆದ ವಾರ ಇಬ್ಬರು ಹುಡುಗಿಯರು ಕ್ಯಾಂಪಸ್ಸಿನ ಹೊಟೇಲಿನಲ್ಲಿ ಏಳು ಹುಡುಗರೊಟ್ಟಿಗೆ ಕೂತು ಹೆಂಡ ಕುಡಿಯುತ್ತಿದ್ದುದನ್ನು ಖುದ್ದು ವೀಡಾ ಕಂಡಿದ್ದಾರೆ. ಅಲ್ಲದೆ ಇನ್ನೊಬ್ಬ ಹುಡುಗ ಡ್ರಗ್‌ ಮಾರಾಟ ದಂಧೆಯಲ್ಲಿ ಸಿಕ್ಕಿದ್ದು, ಆತನಿಗೆ ಎಂಟು ತಿಂಗಳ ಕಾಲ ಕಾಲೇಜಿನಿಂದ ನಿಷೇಧ ಹೇರಿದ್ದಾರೆ.

579 ವಿದ್ಯಾರ್ಥಿನಿಯರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ 70 ಪ್ರತಿಶತ ವಿದ್ಯಾರ್ಥಿನಿಯರು ಕ್ಯಾಂಪಸ್ಸಿನ ಮಾನಭಂಗದ ಗುಟ್ಟನ್ನು ಹೇಳಿದರು. 22 ಪ್ರತಿಶತ ವಿದ್ಯಾರ್ಥಿನಿಯರು ಅಂಥಾ ಕೃತ್ಯಗಳನ್ನು ನೋಡಿಯೋ, ಅನುಭವಿಸಿಯೋ ಇರುವುದಾಗಿ ಹೇಳಿದರು. ನೊಂದ ಹುಡುಗಿಯರು ಈ ಹಿಂದೆ ಮಾನಭಂಗ ಕುರಿತು ದೂರುಕೊಟ್ಟಿದ್ದಕ್ಕೆ, ಅಂಥ ಕೃತ್ಯ ಎಸಗಿದ ಹುಡುಗರು ಬಚಾವಾಗಿ ಬೇರೆ ರೀತಿಯಲ್ಲಿ ಕಿರುಕುಳ ಕೊಟ್ಟಿದ್ದಾಗಿ ಅಲವತ್ತುಕೊಳ್ಳುತ್ತಾರೆ.

ಅಮೆರಿಕಾದ ಏರ್‌ಫೋರ್ಸ್‌ ಅಕಾಡೆಮಿಗೆ ಇದ್ದ ಗತ್ತು ಈಗ ಮಾಯವಾಗಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ. ಇಲ್ಲ, ಇನ್ನು ಮುಂದೆ ಹೀಗಾಗುವುದಿಲ್ಲ ಅನ್ನೋದು ವೀಡಾ ಕೊಡುವ ಭರವಸೆ.

(ಏಜೆನ್ಸೀಸ್‌)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+