ತಪ್ಪು ಸಿಗ್ನಲ್ ಪತ್ತೆ ಹಚ್ಚಿ 28 ಮಂದಿ ಪ್ರಾಣ ಉಳಿಸಿದ ಇನ್‌ಸ್ಯಾಟ್ 3ಎ
ತಪ್ಪು ಸಿಗ್ನಲ್ ಪತ್ತೆ ಹಚ್ಚಿ 28 ಮಂದಿ ಪ್ರಾಣ ಉಳಿಸಿದ ಇನ್‌ಸ್ಯಾಟ್ 3ಎ
ಇಸ್ರೋಗೆ ಸಂದ ಅಭಿನಂದನೆ
ಆಗಸ್ಟ್ 11ರಂದು ಎಂ. ವಿ. ಯುಜಿಯಾ ಬಂಗಾಳ ಕೊಲ್ಲಿಗೆ ಬಿದ್ದು ಮುಳುಗಿದೆ ಎಂದು ಇಸ್ರೋದ ಪ್ರಕಟಣೆ ಶುಕ್ರವಾರ (ಆ.29) ತಿಳಿಸಿದೆ. ತಪ್ಪು ಸಿಗ್ನಲ್‌ಗಳನ್ನು ಇಸ್ರೋದ ಇನ್‌ಸ್ಯಾಟ್ 3ಎ ಸ್ಯಾಟಲೈಟ್‌ಪತ್ತೆ ಹಚ್ಚಿದ ಕೂಡಲೇ ಎಂ. ವಿ. ಯುಜಿಯಾವನ್ನು ಗಮನಿಸುವಂತೆ ಕರಾವಳಿ ಪಡೆಗಳಿಗೆ ಇಸ್ರೋದ ಭಾರತೀಯ ನಿಯಂತ್ರಣಾ ಕೇಂದ್ರ ಸೂಚಿಸಲಾಯಿತು. ವೆಸೆಲ್‌ನಲ್ಲಿದ್ದ 28 ಮಂದಿಯನ್ನು ಬಚಾವ್ ಮಾಡಲಾಯಿತು.
ಈ ವರ್ಷದ ಏಪ್ರಿಲ್ 10ರಂದು ಉಡ್ಡಯನಗೊಂಡ ಇನ್‌ಸ್ಯಾಟ್ 3ಎ ಉಪಗ್ರಹ ಸರ್ಚ್ ಆ್ಯಂಡ್ ರೆಸ್ಕ್ಯೂ ಟ್ರಾನ್ಸ್‌ಪಾಂಡರ್ ಕೆಲಸವನ್ನು ಮಾಡುತ್ತಿದೆ. ಅಂದರೆ ಭಾರತೀಯ ಕರಾವಳಿ ಪ್ರದೇಶವನ್ನು ಈ ಉಪಗ್ರಹ ಹದ್ದುಗಣ್ಣಿನಿಂದ ವೀಕ್ಷಿಸುತ್ತಿರುತ್ತದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications