ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ದಂತ ಆರೋಗ್ಯ ಕೇಂದ್ರ
ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ದಂತ ಆರೋಗ್ಯ ಕೇಂದ್ರ
ದೇಶದಲ್ಲೇ ಇಂಥಾ ಅತ್ಯಾಧುನಿಕ ತಂತ್ರಜ್ಞಾನದ ಮೊದಲ ದಂತ ಆಸ್ಪತ್ರೆ ಇದು
ಈ ದಂತ ಆರೋಗ್ಯ ಕೇಂದ್ರದಲ್ಲಿ 16 ಅತ್ಯಾಧುನಿಕ ಕುರ್ಚಿಗಳು ಇರಲಿದ್ದು, ಪ್ರತಿಯಾಂದಕ್ಕೂ ಪ್ಲಾಸ್ಮಾ ಸ್ಕಿೃೕನ್ ಅಳವಡಿಸಲಾಗಿದೆ. ಕೇಂದ್ರೀಕೃತ ಸ್ಟೆರಿಲೈಸೇಶನ್ ವ್ಯವಸ್ಥೆಯೂ ಉಂಟು. ಆರ್ಥೋಡಾಂಟಿಕ್ಸ್, ಕಾನ್ಸರ್‌ವೇಟಿವ್ ಡೆಂಟಿಸ್ಟ್ರಿ, ಎಂಡೋಡಾಂಟಿಕ್ಸ್, ಪೀಡೋಡಾಂಟಿಕ್ಸ್, ಪ್ರಿವೆಂಟಿವ್ ಡೆಂಟಿಸ್ಟ್ರಿ ಮೊದಲಾದ ಅನೇಕ ಸೇವೆಗಳು ಮಣಿಪಾಲ್ ಆಸ್ಪತ್ರೆಯಲ್ಲಿ ಸಿಗಲಿವೆ.
ಆಸ್ಪತ್ರೆಯ ಆರನೇ ಮಹಡಿಯಲ್ಲಿ ದಂತ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸಂಪೂರ್ಣ ಕಂಪ್ಯೂಟರೀಕೃತವಾಗಿದೆ. ದೇಶದ ಮೊದಲ ಪ್ಲಾನ್‌ಮೆಕಾ ಪ್ರೋಮ್ಯಾಕ್ಸ್ ಎಕ್ಸ್ ರೇ ಘಟಕ ಇರುವ ದೇಶದ ಮೊದಲ ಆಸ್ಪತ್ರೆ ನಮಮ್ದು. ರೋಗಿ ಒಂದೇ ದಿಕ್ಕಿಗೆ ಮುಖ ಮಾಡಿ ಕೂತಾಗಲೂ, ವಿವಿಧ ಕೋನಗಳಿಂದ ಮುಕ್ತವಾಗಿ ಪರೀಕ್ಷಿಸಲು ಈ ಘಟಕದಿಂದ ಸಾಧ್ಯ ಎಂದು ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಆರ್.ಬೇಸಿಲ್ ಹೇಳಿದರು.
(ಇನ್ಫ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications