ಪ್ರಗತಿಪರ ಜನತಾದಳದ ರಾಜ್ಯಾಧ್ಯಕ್ಷರಾಗಿ ಕೆ.ಎನ್.ನಾಗೇಗೌಡ
ಪ್ರಗತಿಪರ ಜನತಾದಳದ ರಾಜ್ಯಾಧ್ಯಕ್ಷರಾಗಿ ಕೆ.ಎನ್.ನಾಗೇಗೌಡ
ರಾಜಕೀಯ ಲೆಕ್ಕಾಚಾರಗಳ ಪೋಟಿಯಲ್ಲಿ ನಾಗೇಗೌಡರಿಗೆ ಅಧ್ಯಕ್ಷ ಪಟ್ಟ
ಪ್ರಗತಿಪರ ಜನತಾದಳದ ಅಧ್ಯಕ್ಷರಾಗಿ ಕೆ.ಎನ್.ನಾಗೇಗೌಡ ನೇಮಕವಾಗಿದ್ದು , ಈ ನೇಮಕ ತಕ್ಷಣದಿಂದ ಜಾರಿಗೆ ಬಂದಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಸ್.ಆರ್.ಬೊಮ್ಮಾಯಿ ಆ.25ರ ಸೋಮವಾರ ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿ.ಭೈರೇಗೌಡರ ನಿಧನದಿಂದಾಗಿ ಪ್ರಗತಿಪರ ಜನತಾದಳದ ಅಧ್ಯಕ್ಷ ಸ್ಥಾನ ತೆರವಾಗಿತ್ತು . ತೆರವಾಗಿದ್ದ ಸ್ಥಾನಕ್ಕೆ ಸೂಕ್ತ ವ್ಯಕ್ತಿಯನ್ನು ನೇಮಿಸುವ ಹೊಣೆಗಾರಿಕೆಯನ್ನು ಪಕ್ಷದ ಮುಖಂಡರು ಬೊಮ್ಮಾಯಿ ಅವರ ಹೆಗಲಿಗೆ ಹೊರಿಸಿದ್ದರು.
ಪ್ರಗತಿಪರ ಜನತಾದಳದ ನೂತನ ಅಧ್ಯಕ್ಷ ಕೆ.ಎನ್.ನಾಗೇಗೌಡರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಟೀಕಾಕಾರರಲ್ಲಿ ಒಬ್ಬರಾಗಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications