ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟ, 24 ಮಂದಿ ಬಲಿ
ಮುಂಬಯಿಯಲ್ಲಿ ಸರಣಿ ಬಾಂಬ್ ಸ್ಫೋಟ, 24 ಮಂದಿ ಬಲಿ
1993ರ ಸರಣಿ ಬಾಂಬ್ ಸ್ಫೋಟವನ್ನು ನೆನಪಿಸಿದ ಘಟನೆ, ಮುಂಬಯಿಗರಲ್ಲಿ ಮಡುಗಟ್ಟಿದ ಭಯ
ಗೇಟ್‌ವೇ ಆಫ್ ಇಂಡಿಯಾದ ಕಿಕ್ಕಿರಿದ ಜನಸಂದಣಿ ಪ್ರದೇಶದಲ್ಲಿ ಟ್ಯಾಕ್ಸಿಯಾಂದನ್ನು ಗುರಿಯಾಗಿಟ್ಟುಕೊಂಡು ಬಾಂಬ್ ಸ್ಫೋಟಿಸಲಾಗಿದ್ದು, 6 ಮಂದಿ ಸತ್ತಿದ್ದಾರೆ. ಮುಂಬಾದೇವಿ ದೇಗುಲದ ಹತ್ತಿರ ಇರುವ ಝವೇರಿ ಬಜಾರಿನಲ್ಲಿ ಆಗಿರುವ ಸ್ಫೋಟದಲ್ಲಿ 7 ಮಂದಿ ಸತ್ತಿದ್ದಾರೆ.
ಗೇಟ್‌ವೇ ಆಫ್ ಇಂಡಿಯಾ ಬಳಿ ನಡೆದ ಬಾಂಬ್ ಸ್ಫೋಟ ತೀವ್ರವಾಗಿದ್ದು, ಸ್ಫೋಟದ ಸದ್ದು ತಾಜ್ ಹೊಟೇಲಿನವರೆಗೆ ಕೇಳಿಸಿದೆ. ಝವೇರಿ ಬಜಾರ್ ಪ್ರದೇಶದಲ್ಲಿ ಕನಿಷ್ಠ 30 ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಬಾಂಬ್ ಸ್ಫೋಟಕ್ಕೆ ಕಾರಣಗಳೇನು ಎಂಬುದು ಇನ್ನೂ ವರದಿಯಾಗಿಲ್ಲ. ಪೊಲೀಸರು ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡುತ್ತಿದ್ದಾರೆ. 1993ರಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟವನ್ನು ನೆನಪಿಸುವ ಈ ಘಟನೆ ಮುಂಬಯಿಗರಲ್ಲಿ ಭಯ ಹುಟ್ಟುಹಾಕಿದ್ದು, ಎಲ್ಲೆಲ್ಲೂ ಆತಂಕ ಮನೆ ಮಾಡಿದೆ.
ಕೆಲವರು ನಾಲ್ಕು ಸ್ಫೋಟಗಳು ನಡೆದಿವೆ ಎಂದು ಸುದ್ದಿ ಹಬ್ಬಿಸುತ್ತಿದ್ದು, ಈ ಬಗ್ಗೆ ಪೊಲೀಸರಿಂದ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಇನ್ನಷ್ಟು ವಿವರಗಳ ನಿರೀಕ್ಷೆಯಿದೆ.
ಮೊಬೈಲ್ ಸಂಪರ್ಕ ಕಡಿತ : ಬಾಂಬ್ ಸ್ಫೋಟದಿಂದಾಗಿ ಮುಂಬಯಿ ಮಹಾನಗರದಲ್ಲಿ ಮೊಬೈಲ್ ದೂರವಾಣಿ ಸಂಪರ್ಕ ಕಡಿದುಹೋಗಿದ್ದು , ಜನಜೀವನ ಅಸ್ತವ್ಯಸ್ತಗೊಂಡಿದೆ. ಷೇರು ಮಾರುಕಟ್ಟೆ ಹಾಗೂ ವಾಣಿಜ್ಯೋದ್ಯಮಗಳಲ್ಲಿ ಅಲ್ಲಕಲ್ಲೋಲ ಉಂಟಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications