ಪೆಪ್ಸಿ-ಕೋಕ್‌ನಲ್ಲಿ ವಿಷ ಇಲ್ಲ- ಸುಷ್ಮಾ ಸ್ವರಾಜ್ ಶುಚಿ ಚೀಟಿ
ಪೆಪ್ಸಿ-ಕೋಕ್‌ನಲ್ಲಿ ವಿಷ ಇಲ್ಲ- ಸುಷ್ಮಾ ಸ್ವರಾಜ್ ಶುಚಿ ಚೀಟಿ
‘ಹನ್ನೆರಡೂ ಮೆದು ಪಾನೀಯಗಳಲ್ಲಿ ಕೀಟನಾಶಕದ ಅಂಶ ಇಲ್ಲವೇ ಇಲ್ಲ’
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಸುಷ್ಮಾ ಸ್ವರಾಜ್ ಗುರುವಾರ (ಆ.21) ಲೋಕಸಭೆಯಲ್ಲಿ ಈ ವಿಷಯವನ್ನು ಪ್ರಕಟಿಸಿದರು. ದೆಹಲಿಯ ಸರ್ಕಾರೇತರ ಸಂಸ್ಥೆಯಾದ ವಿಜ್ಞಾನ ಮತ್ತು ಪರಿಸರ ಕೇಂದ್ರ ಕೊಟ್ಟ ವರದಿಯಂತೆ ಮೆದು ಪಾನೀಯಗಳಲ್ಲಿ ಕೀಟನಾಶಕದ ಅಂಶ ಇಲ್ಲವೆಂಬುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದು ಸುಷ್ಮಾ ಹೇಳಿದರು.
ಸುರಕ್ಷೆಯ ನಿಮಿತ್ತ ಯಾವ್ಯಾವ ನಿಯಮಾವಳಿಗಳನ್ನು ಅನುಸರಿಸಬೇಕೋ, ಅವನ್ನು ಹನ್ನೆರಡೂ ತಂಪು ಪಾನೀಯ ಕಂಪನಿಗಳು ಅನುಸರಿಸಿರುವುದು ಪರೀಕ್ಷೆಯಿಂದ ಗೊತ್ತಾಗಿದೆ. ಹೀಗಿದ್ದೂ, ಮೆದು ಪಾನೀಯಗಳಲ್ಲಿನ ನೀರಿನ ಅಂಶದ ವಿಷಯದಲ್ಲಿ ಯೂರೋಪಿಯನ್ ಯೂನಿಯನ್ ನಿಯಮಾವಳಿಯನ್ನು ಜಾರಿಗೆ ತರುವ ಕುರಿತು ಪರಿಶೀಲಿಸುತ್ತಿದ್ದೇವೆ ಎಂದು ಸಚಿವೆ ಲೋಕಸಭೆಗೆ ತಿಳಿಸಿದರು.
(ಏಜೆನ್ಸೀಸ್)
ಪೂರಕ ಓದಿಗೆ-
ಪೆಪ್ಸಿ- ಕೋಲಾ ಕೋಲಾಹಲ
ಮುಖಪುಟ / ವಾರ್ತೆಗಳು












Click it and Unblock the Notifications