ಚುನಾವಣೆ ಖರ್ಚಿಗಾಗಿ ಡೇಟಿಂಗ್ !
ಚುನಾವಣೆ ಖರ್ಚಿಗಾಗಿ ಡೇಟಿಂಗ್ !
ರಾಜಕೀಯವನ್ನೇ ಉಸಿರಾಡುವ ಹದಿನಾರಾಣೆ ರಾಜಕಾರಣಿಗಳಿಗೆ ಬಣ್ಣದ ಮಂದಿ ಸೆಡ್ಡು ಹೊಡೆದಿದ್ದಾರೆ. ಮೈಮೇಲೆ ಬಟ್ಟೆ ನಿಲ್ಲದ ಸಿನಿಮಾ ನಟಿಯಾಬ್ಬಳು ಸ್ಪರ್ಧಿಸುವುದರೊಂದಿಗೆ ಕ್ಯಾಲಿಫೋರ್ನಿಯ ಗವರ್ನರ್ ಚುನಾವಣೆ ಬಣ್ಣಗಳು ಗಾಢವಾಗಿವೆ. ಆಕೆಯ ಬಂಡವಾಳವಾದರೂ ಏನು ಗೊತ್ತಾ ?
‘ನೋ ಸೆಕ್ಸ್ ಪ್ಲೀಸ್ ! ಇದು ರಾಜಕೀಯ !!’
ಯುದ್ಧದಲ್ಲಿ ರಾಜಕಾರಣದಲ್ಲಿ ಹಾಗೂ ವ್ಯಾಪಾರದಲ್ಲಿ ಎಲ್ಲವೂ ಸಹ್ಯವೇ; ಪ್ರತಿಯಾಂದು ನ್ಯಾಯವೇ- ಎನ್ನುವುದಕ್ಕೆ ಗೀತಾಚಾರ್ಯ ಕೃಷ್ಣ , ಕುಟಿಲೋಪಾಯಗಳ ಚಾಣಕ್ಯ, ಉಡದ ಪಟ್ಟಿನ ದೇವೇಗೌಡ-ಹೆಗಡೆ ತನಕ ಉದಾಹರಣೆಗಳಿರುವಾಗ ಈಯಮ್ಮ ರಾಜಕಾರಣವನ್ನು ಮುಂದಿಟ್ಟುಕೊಂಡು ‘ನೋ ಸೆಕ್ಸ್ ಪ್ಲೀಸ್’ ಎನ್ನುತ್ತಿದ್ದಾಳೆ.
ಈಕೆಯ ಹೆಸರು ಮೇರಿ ಕ್ಯಾರಿ (Mary Carey). ಪ್ರಸ್ತುತ ರಾಜಕಾರಣದ ಹುಚ್ಚು ಹಚ್ಚಿಸಿಕೊಂಡಿರುವ ಮೇರಿಯ ಅಸಲೀ ಹುಚ್ಚು ಸಿನಿಮಾ. ಆಕೆ ಪೋಲಿ ಚಿತ್ರಗಳ ನಾಯಕಿ ಎಂದೇ ಹೆಸರಾದವಳು. ಈ ಪರಿಯ ನಟಿ ಈಗ ಚುನಾವಣೆಗೆ ನಿಂತಿದ್ದಾಳೆ. ಕ್ಯಾಲಿಫೋರ್ನಿಯ ಗವರ್ನರ್ ಪದಕ್ಕೆ ಸ್ಪರ್ಧಿಸಿರುವ 135 ಹುರಿಯಾಳುಗಳಲ್ಲಿ ಮೇರಿಯೂ ಒಬ್ಬಳು. ಆಕೆಯ ಸ್ಪರ್ಧೆಯಿಂದ ಚುನಾವಣೆಗೆ ರಂಗು ಬಂದಿದೆ.
ಈ ಬಾರಿಯ ಕ್ಯಾಲಿಫೋರ್ನಿಯ ಗವರ್ನರ್ ಚುನಾವಣೆ ಭಾರೀ ಸುದ್ದಿಯಲ್ಲಿದೆ. ಜನಪ್ರಿಯ ಹಾಲಿವುಡ್ ನಟ ‘ಶಿವಾಜಿನಗರ್’ ಅರ್ಥಾತ್ ಆರ್ನಾಲ್ಡ್ ಶ್ವಾಸನೇಗರ್ (Arnold Schwarzenegger) ಕೂಡ ಚುನಾವಣೆಯ ಓರ್ವ ಸ್ಪರ್ಧಿ. ‘ಟರ್ಮಿನೇಟರ್’ ಸರಣಿ ಚಿತ್ರಗಳ ಖ್ಯಾತಿಯ ವೀರಾಧಿವೀರ ಶ್ವಾಸನೇಗರ್ ; ಇನ್ನೊಂದೆಡೆ ದೇಹವನ್ನೇ ಬಂಡಾಳವಗಿಸಿಕೊಂಡಿರುವ ಮೇರಿ. ಶೌರ್ಯ ಹಾಗೂ ಸೌಂದರ್ಯ. ನಿಮ್ಮ ಓಟು ಯಾರಿಗಯ್ಯಾ ?
ಚುನಾವಣೆ ಅಂದರೆ ತಮಾಷೆಯಾ ? ಭಾರತದ ಚುನಾವಣೆಗಳ ರೀತಿ- ಸಂಜೆಗತ್ತಲಲ್ಲಿ ಸಾರಾಯಿ ಪಾಕೀಟು ಹಂಚುವುದು, ಬಾಡೂಟ ಹಾಕುವುದು, ಮೂಗುನತ್ತು - ಸೀರೆ- ಹಸಿರು ನೋಟು ಹಂಚುವುದು, ಇಂಥದ್ದಕ್ಕೆಲ್ಲಾ ಅಮೆರಿಕದಲ್ಲಿ ಆಸ್ಪದವಿಲ್ಲದಿರಬಹುದು. ಆದರೂ ಚುನಾವಣೆ ಎಂದರೆ ದುಡ್ಡು ಬೇಡವಾ ! ಪ್ರಚಾರ, ಓಡಾಟ... ಖರ್ಚಿನ ಬಾಬತ್ತು ಒಂದೇ ಎರಡೇ !
ಶಿವಾಜಿನಗರ್ ಮಾತು ಬಿಡಿ. ಆತನ ಬಳಿ ಕೊಳೆಯುವಷ್ಟು ದುಡ್ಡಿದೆ. ಆದರೆ ಈ ನಾರೀಮಣಿ ಮೇರಿ ಬಳಿ ಚುನಾವಣೆಗೆ ಸ್ಪರ್ಧಿಸುವಷ್ಟು ದುಡ್ಡಿಲ್ಲವಂತೆ. ದೇಣಿಗೆ ಕೇಳಿದರೆ ದುಡ್ಡು ಹುಟ್ಟುವುದು ಅನುಮಾನ. ರಾಜಕೀಯದಲ್ಲಿ ಎಳೆನಿಂಬೆಯಂಥ ಹಾಗೂ ಸ್ಪಷ್ಟವಾದೊಂದು ರಾಜಕೀಯ ನಿಲುವು ಇಲ್ಲದಿರುವ ಹೆಣ್ಣಿಗೆ ಯಾರು ದೇಣಿಗೆ ಕೊಟ್ಟಾರು ? ಹಾಗೆಂದು ಮೈಮುದುರಿ ಮೂಲೆಯಲ್ಲಿ ಕೂರಲಾದೀತೆ ? ದುಡ್ಡು ಸಂಗ್ರಹಿಸಲು ಮೇರಿಗೊಂದು ಐಡಿಯಾ ಬಂದಿದೆ. ಅದು ಏನಪ್ಪಾ ಅಂದರೆ- ಡೇಟಿಂಗ್! ಯಾರೂ ಬೇಕಾದರೂ ಆಗಿರಬಹುದು ; ದುಡ್ಡು ಕೊಡುವಂತ ಥೈಲಿವಾಲಾಗಳನ್ನು ಮೇರಿ ಡೇಟಿಂಗ್‌ಗೆ ಆಹ್ವಾನಿಸಿದ್ದಾಳೆ.
ಡೇಟಿಂಗ್ ಅಂದಾಕ್ಷಣ ಸೆಕ್ಸ್ ಎಂದೇನೂ ಭಾವಿಸಬೇಕಿಲ್ಲ . ಮೇರಿ ಮುಂದಿಟ್ಟಿರುವ ಡೇಟಿಂಗ್ ಮೆನುವಿನಲ್ಲಿರುವುದು ಊಟ ಜೊತೆಗಿಷ್ಟು ಹರಟೆ, ಅಷ್ಟೇ. ಇಷ್ಟಕ್ಕೆ ತೆರಬೇಕಾದ ಬಾಬತ್ತು 5 ಸಾವಿರ ಡಾಲರ್ ಹಾಗೂ ಅದಕ್ಕೂ ಹೆಚ್ಚು .
‘ನನಗೆ ಯಾವ ಪ್ರಬಲ ರಾಜಕೀಯ ಪಕ್ಷದ ಬೆನ್ನುಲುಬೂ ಇಲ್ಲ . ಆ ಕಾರಣದಿಂದಲೇ ಅಸಾಂಪ್ರಾದಾಯಿಕ ಮಾರ್ಗಗಳಿಂದ ಚುನಾವಣೆಗೆ ದುಡ್ಡು ಸಂಗ್ರಹಿಸುತ್ತಿದ್ದೇನೆ’ ಎಂದು ಹೇಳಿಕೆಯಾಂದರಲ್ಲಿ ಮೇರಿ ತಿಳಿಸಿದ್ದಾಳೆ.
ಚುನಾವಣೆಯ ಸ್ಪರ್ಧೆಯನ್ನಂತೂ ಮೇರಿ ಗಂಭೀರವಾಗಿ ಪರಿಗಣಿಸಿದ್ದಾಳೆ. ಅಂದಹಾಗೆ, ಆಕೆಯ ಡೇಟಿಂಗ್ ಆಹ್ವಾನಕ್ಕೆ ಪ್ರತಿಕ್ರಿಯೆಗಳು ಬಂದಿವೆಯಾ ? ಬರುತ್ತಿವೆಯಾ ? ವಿವರಗಳು ಹೊರಬಿದ್ದಿಲ್ಲ . ಮೇರಿ ತುಂಬಾ ಬಿಜಿ !
ಕ್ಯಾಲಿಫೋರ್ನಿಯಾ ಮತದಾರರ ಮುಂದಂತೂ ಸಾಕಷ್ಟು ಆಯ್ಕೆಗಳಿವೆ. ಅಪ್ಪಿತಪ್ಪಿ ಮೇರಿಯೇನಾದರೂ ಆಯ್ಕೆಯಾದಲ್ಲಿ ಆಕೆಯ ರಾಜಕೀಯ ಆದ್ಯತೆಗಳು ಏನೇನಿರಬಹುದು... ?
ಶಾಂತಂ ಪಾಪಂ !
ಪೂರಕ ಓದಿಗೆ-
ಶಿವಾಜಿನಗರ್ ಗದ್ದಲ ಅಮೆರಿಕನ್ನಡದ ಧ್ಯಾನ !
ಮುಖಪುಟ / ವಾರ್ತೆಗಳು
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications