ರಂಗದ ಮೇಲೆ ಇಂಗ್ಲಿಷ್‘ನಾಗಮಂಡಲ’
ರಂಗದ ಮೇಲೆ ಇಂಗ್ಲಿಷ್‘ನಾಗಮಂಡಲ’
ಸೆ. 3ರಿಂದ ಗುರುನಾನಕ್ ಭವನದಲ್ಲಿ ಇಂಗ್ಲಿಷ್ ನಾಗಮಂಡಲ ಪ್ರದರ್ಶನ
ಭಾರತೀಯ ಕೃತಿಕಾರರ ಇಂಗ್ಲಿಷ್ ಕೃತಿಗಳನ್ನು ರಂಗದ ಮೇಲೆ ಪ್ರಸ್ತುತ ಪಡಿಸುವ ಮೂಲಕ ರಂಗಭೂಮಿ ಕ್ಷೇತ್ರದಲ್ಲಿ ಬಾಲಾಜಿ ಮನೋಹರ್ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಬಾಲಾಜಿ ಮನೋಹರ್ ಇಂಗ್ಲೀಷ್‌ನಲ್ಲಿ ನಿರ್ದೇಶಿಸಿರುವ ಕಾರ್ನಾಡರ ‘ನಾಗಮಂಡಲ’ ನಾಟಕದ ಪ್ರದರ್ಶನ ಕಾರ್ಯಕ್ರಮ ಬೆಂಗಳೂರಿನಲ್ಲಿ ಏರ್ಪಾಟಾಗಿದೆ.
ಕನ್ನಡ ಜಾನಪದ ನಾಟಕವನ್ನು ಇಂಗ್ಲಿಷ್ ಸಾಹಿತ್ಯ ಲೋಕದ ಸಹೃದಯರಿಗೆ ಪರಿಚಯಿಸುವ ಉದ್ದೇಶದಿಂದ ನಾಗಮಂಡಲ ನಾಟಕದ ಇಂಗ್ಲಿಷ್ ರೂಪಾಂತರವನ್ನು ರಂಗದ ಮೇಲೆ ಪ್ರಸ್ತುತಪಡಿಸಲಾಗುತ್ತಿದೆ. ಕನ್ನಡದ ಎಲ್ಲ ಭಾವಾಭಿವ್ಯಕ್ತಿಯನ್ನು ಇಂಗ್ಲಿಷ್‌ನಲ್ಲಿ ಸಮರ್ಥವಾಗಿ ಪ್ರತಿಬಿಂಬಿಸುವುದು ಕಷ್ಟವಾದರೂ ಕಾರ್ನಾಡರು ತಮ್ಮ ನಾಗಮಂಡಲ ನಾಟಕವನ್ನು ಯಶಸ್ವಿಯಾಗಿ ಭಾಷಾಂತರಿಸಿದ್ದಾರೆ ಎಂಬುದು ಬಾಲಾಜಿ ಮನೋಹರ್ ಅಭಿಪ್ರಾಯ.
ಒಂದೂಮುಕ್ಕಾಲು ಗಂಟೆ ಅವಧಿಯ ‘ನಾಗಮಂಡಲ’ ಇಂಗ್ಲೀಷ್ ನಾಟಕವನ್ನು ಸೆಪ್ಟೆಂಬರ್ 3, 4 ಮತ್ತು 5ರಂದು ಗುರುನಾನಕ್ ಭವನದಲ್ಲಿ ಸಂಜೆ ಏಳು ಗಂಟೆಗೆ ಪ್ರಸ್ತುತಪಡಿಸಲಾಗುವುದು.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ಅಪೂರ್ಣತೆಯ ಪರಿಪೂರ್ಣ ಚಿತ್ರಕಾರ
ಮುಖಪುಟ / ವಾರ್ತೆಗಳು












Click it and Unblock the Notifications