ವೇಮಗಲ್- ಹುನಗುಂದದಲ್ಲಿ ಸೆ.26 ರಂದು ಉಪ ಚುನಾವಣೆ
ವೇಮಗಲ್- ಹುನಗುಂದದಲ್ಲಿ ಸೆ.26 ರಂದು ಉಪ ಚುನಾವಣೆ
ಸೆಪ್ಟಂಬರ್ 6 ನಾಮಪತ್ರ ಸಲ್ಲಿಸಲು ಕೊನೆಯ ದಿನ
ವೇಮಗಲ್ ವಿಧಾನಸಭಾ ಕ್ಷೇತ್ರ ಹಾಗೂ ಮಾಜಿ ಸಚಿವ ಕಾಶಪ್ಪನವರ್ ಅವರ ನಿಧನದಿಂದ ತೆರವಾಗಿರುವ ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಸೆ.26ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಸೆ.6 ಕೊನೆಯ ದಿನ. ನಾಮಪತ್ರ ವಾಪಸ್ಸು ಪಡೆಯಲು ಸೆ.11 ಕೊನೆಯ ದಿನ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಅಭಿಜಿತ್ ದಾಸ್ ಗುಪ್ತ ಈ ಉಪ ಚುನಾವಣಗಳ ಕುರಿತ ಪ್ರಕಟಣೆಯನ್ನು ಮಂಗಳವಾರ ಹೊರಡಿಸಿದರು.
ಕೋಲಾರ ಉಪ ವಿಭಾಗದ ಉಪ ನಿರೀಕ್ಷಣಾಧಿಕಾರಿಯು ವೇಮಗಲ್ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಹಾಗೂ ಹುನಗುಂದ ತಾಲ್ಲೂಕಿನ ತಹಸಿಲ್ದಾರ್ ಅವರು ಹುನಗುಂದ ಕ್ಷೇತ್ರದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications