ವಿಶ್ವದ ಮೊದಲ ತಂಬಾಕು ರಹಿತ ಬೀಡಿ ಬೆಂಗಳೂರಲ್ಲಿ ಬಿಡುಗಡೆ
ವಿಶ್ವದ ಮೊದಲ ತಂಬಾಕು ರಹಿತ ಬೀಡಿ ಬೆಂಗಳೂರಲ್ಲಿ ಬಿಡುಗಡೆ
2005ನೇ ಇಸವಿಯಾಳಗೆ ದೇಶದ 1500 ನಗರಗಳಲ್ಲಿ ವರ್ಧನ್ ಬೀಡಿಗಳು
ತಂಬಾಕಿಗೆ ಪರ್ಯಾಯವಾದ ‘ವರ್ಧನ್’ ಬೀಡಿಗಳನ್ನು ಆ.19ರ ಮಂಗಳವಾರ ಡಿಸಿಸಿ ಅಧಿಕಾರಿ ಕಾರ್ತಿಕ್ ರೈನ್ ಬಿಡುಗಡೆ ಮಾಡಿದರು. ಬಿಡುಗಡೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ತಿಕ್- ವರ್ಧನ್ ಬೀಡಿಗಳು ವರ್ಷಾಂತ್ಯದ ವೇಳೆಗೆ ದೇಶದ 150 ನಗರಗಳಲ್ಲಿ ದೊರೆಯಲಿವೆ. 2005ನೇ ಇಸವಿಯಾಳಗೆ ದೇಶದ 1500 ನಗರಗಳಲ್ಲಿ ವರ್ಧನ್ ಬೀಡಿಗಳು ಮಾರುಕಟ್ಟೆ ಕಂಡುಕೊಳ್ಳುವ ಗುರಿಯನ್ನು ಹೊಂದಿದ್ದೇವೆ ಎಂದರು.
ವಿಶ್ವದ ಮೊಟ್ಟ ಮೊದಲ ತಂಬಾಕು ರಹಿತ ಬೀಡಿಗಳು ಎಂದು ‘ವರ್ಧನ್’ ಬೀಡಿಗಳನ್ನು ಬಣ್ಣಿಸಿದ ಕಾರ್ತಿಕ್, ವರ್ಧನ್ ಬೀಡಿಗಳನ್ನು ಭಾರತೀಯ ಗಿಡಮೂಲಿಕೆಗಳಿಂದ ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದರು.
ತಂಬಾಕಿನಿಂದ ಬಿಡುಗಡೆ ಹೊಂದಲು ಬಯಸುವವರಿಗೆ ‘ವರ್ಧನ್’ ಬೀಡಿಗಳು ನೆರವು ನೀಡಲಿವೆ. ಮಾಮೂಲಿ ಬೀಡಿಗಳನ್ನು ಸೇದಿದ ಅನುಭವವನ್ನು ‘ವರ್ಧನ್’ ಬೀಡಿಗಳು ಕೂಡಾ ನೀಡುತ್ತವೆ. ಆದರೆ, ತಂಬಾಕಿನ ಅಡ್ಡ ಪರಿಣಾಮಗಳು ‘ವರ್ಧನ್’ ಬೀಡಿಗಳ ಸೇವನೆಯಿಂದ ಉಂಟಾಗುವುದಿಲ್ಲ ಎಂದು ಕಾರ್ತಿಕ್ ರೈನಾ ಹೇಳಿದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications