ಏರ್‌ಡೆಕ್ಕನ್: ಆ. 25ರಿಂದ ಅತಿ ಕಡಿಮೆ ದರದ ವಿಮಾನ ಸೇವೆ
ಏರ್‌ಡೆಕ್ಕನ್: ಆ. 25ರಿಂದ ಅತಿ ಕಡಿಮೆ ದರದ ವಿಮಾನ ಸೇವೆ
ನವೆಂಬರ್ ವೇಳೆಗೆ ಏರ್ ಡೆಕ್ಕನ್‌ನಿಂದ ಪ್ರತಿ ದಿನ 70 ಹಾರಾಟಗಳು
ಹುಬ್ಬಳ್ಳಿ- ಮುಂಬೈ ಮಧ್ಯೆ ಒಂದು ವಿಮಾನ ಮತ್ತು ಇನ್ನೊಂದು ಬೆಂಗಳೂರು- ಬೆಳಗಾವಿ- ಮುಂಬೈ ನಡುವೆ ಸಂಚರಿಸಲಿವೆ. ಮೊದಲ ವಿಮಾನ ನಗರದ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ತನ್ನ ಸಂಚಾರ ಆರಂಭಿಸಲಿದೆ. ಆಗಸ್ಟ್ 26ರ ಬೆಳಗ್ಗೆ 6 ಗಂಟೆಯಿಂದ ನಿಯಮಿತವಾಗಿ ವಾಣಿಜ್ಯ ಹಾರಾಟ ಆರಂಭವಾಗಲಿದೆ.
ಸದ್ಯದಲ್ಲೇ ಮಂಗಳೂರು, ರಾಜಮಂಡ್ರಿ, ತಿರುಪತಿ, ಕೊಯಮತ್ತೂರು, ಮಧುರೈನಂತಹ ಸ್ಥಳಗಳಿಂದ ದೇಶದ ಬೃಹತ್ ನಗರಗಳಿಗೆ ಸಂಪರ್ಕ ಕಲ್ಪಿಸಲಾಗುವುದು ಎಂದು ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಜಿ. ಆರ್. ಗೋಪಿನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನೆರಡು ವಿಮಾನಗಳು ಸೆಪ್ಟೆಂಬರ್‌ನಲ್ಲಿ ಹಾಗೂ ಉಳಿದೆರಡು ವಿಮಾನಗಳು ಅಕ್ಟೋಬರ್ ಕೊನೆಯ ವಾರದಲ್ಲಿ ಬರಲಿವೆ. ಈ ವರ್ಷದ ನವೆಂಬರ್ ವೇಳೆಗೆ ಏರ್ ಡೆಕ್ಕನ್ ಪ್ರತಿದಿನ 70 ಹಾರಾಟಗಳನ್ನು ನಡೆಸಲಿದೆ.
(ಇನ್ಫೋ ವಾರ್ತೆ)
Post your views
ಮುಖಪುಟ / ವಾರ್ತೆಗಳು












Click it and Unblock the Notifications