ಬಿಜಾಪುರ ಮಹಿಳಾ ವಿವಿ ತರಗತಿಗಳು ಆಗಸ್ಟ್‌ 20ರಿಂದ ಆರಂಭ

ಬಿಜಾಪುರ ಮಹಿಳಾ ವಿವಿ ತರಗತಿಗಳು ಆಗಸ್ಟ್‌ 20ರಿಂದ ಆರಂಭ
ವಿವಿಯಲ್ಲಿ 380 ಮಂದಿಗೆ ಮಾತ್ರ ಪ್ರವೇಶ

ಬಿಜಾಪುರ: ಬಿಜಾಪುರದಲ್ಲಿ ಆರಂಭಿಸಲಾಗಿರುವ ಮಹಿಳಾ ವಿಶ್ವ ವಿದ್ಯಾಲಯದಲ್ಲಿ ಆಗಸ್ಟ್‌ 20ರಿಂದ ತರಗತಿಗಳು ಆರಂಭವಾಗಲಿವೆ ಎಂದು ವಿವಿಯ ವಿಶೇಷಾಧಿಕಾರಿ ಎಸ್‌. ಎಂ. ಜಾಮದಾರ್‌ ತಿಳಿಸಿದ್ದಾರೆ.

ಅಕ್ಕ ಮಹಾದೇವಿ, ಸೋನಿಯಾ ಗಾಂಧಿ ಸೇರಿದಂತೆ ನಾನಾ ಹೆಸರುಗಳನ್ನು ಮಹಿಳಾ ವಿವಿಗೆ ಇಡುವಂತೆ ಬಂದಿರುವ ಪ್ರಸ್ತಾವನೆಗಳು ಸರ್ಕಾರದ ಮುಂದಿದ್ದರೂ- ಸದ್ಯಕ್ಕೆ ಮಹಿಳಾ ವಿಶ್ವ ವಿದ್ಯಾಲಯಕ್ಕೆ ಯಾವುದೇ ಹೆಸರಿಡುವುದಿಲ್ಲವೆಂದು ಸರ್ಕಾರ ಸ್ಪಷ್ಟಪಡಿಸಿದೆ.

  • ವಿಶ್ವ ವಿದ್ಯಾಲಯದಲ್ಲಿ 18 ವಿಷಯಗಳಿಗೆ ಪ್ರಾಮುಖ್ಯತೆ ನೀಡಲಾಗುವುದು. ಈ ಬಾರಿ ಕನ್ನಡ, ಇಂಗ್ಲಿಷ್‌, ಅರ್ಥ ಶಾಸ್ತ್ರ , ಮಹಿಳಾ ಅಧ್ಯಯನ, ಸಮಾಜ ಶಾಸ್ತ್ರ ಮತ್ತು ಶಿಕ್ಷಣ ವಿಷಯಗಳನ್ನು ವಿವಿಯಲ್ಲಿ ಅಧ್ಯಯನ ಮಾಡಬಹುದು.
  • ಪ್ರತಿ ವಿಷಯಕ್ಕೆ 50 ಮಂದಿ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು.
  • ವಿವಿಯಲ್ಲಿ 380 ಮಂದಿಗೆ ಮಾತ್ರ ಪ್ರವೇಶ.
  • ವಿವಿ ನಡೆಸುವುದಕ್ಕೆ ಸರಕಾರದಿಂದ 50 ಕೋಟಿ ರೂಪಾಯಿ ಹಣ ಬಿಡುಗಡೆಯಾಗಲಿದೆ.
(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+