Get Updates
Get notified of breaking news, exclusive insights, and must-see stories!

ವಿಧಾನಪರಿಷತ್‌ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ವಿ.ಆರ್‌.ಸುದರ್ಶನ್‌

ವಿಧಾನಪರಿಷತ್‌ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ವಿ.ಆರ್‌.ಸುದರ್ಶನ್‌
ದಳ ಬಣಗಳ ಮತದಾನ ಬಹಿಷ್ಕಾರ, ಬಿಜೆಪಿಯ ವಿಮಲಾ ಗೌಡರಿಗೆ ಭಾರೀ ಅಂತರದ ಸೋಲು

ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್‌ ಪಕ್ಷದ ವಿ.ಆರ್‌.ಸುದರ್ಶನ್‌ ರಾಜ್ಯ ವಿಧಾನ ಪರಿಷತ್ತಿನ ಉಪಾಧ್ಯಕ್ಷರಾಗಿ ಆ.7ರ ಗುರುವಾರ ಆಯ್ಕೆಯಾದರು..

ವಿಧಾನ ಪರಿಷತ್‌ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹುರಿಯಾಳು ವಿಮಲಾ ಗೌಡ ಅವರನ್ನು 24 ಮತಗಳಿಂದ ಸೋಲಿಸಿದ ಸುದರ್ಶನ್‌ ವಿಜಯಿಯಾದರು. 75 ಸದಸ್ಯರ ಬಲದ ಪರಿಷತ್ತಿನಲ್ಲಿ - ಸುದರ್ಶನ್‌ 36 ಹಾಗೂ ವಿಮಲಾಗೌಡ 12 ಓಟು ಪಡೆದರು. ಪ್ರಗತಿಪರ ಜನತಾದಳ ಹಾಗೂ ಜಾತ್ಯತೀತ ಜನತಾದಳ ಸದಸ್ಯರು ಮತದಾನದಿಂದ ದೂರವುಳಿದಿದ್ದರು.

ಸುದರ್ಶನ್‌ ಅವರ ಹೆಸರನ್ನು ಪರಿಷತ್ತಿನ ಉಪಾದ್ಯಕ್ಷರ ಸ್ಥಾನಕ್ಕೆ ಜಲ ಸಂಪನ್ಮೂಲ ಸಚಿವ ಎಚ್‌.ಕೆ.ಪಾಟೀಲ್‌ ಸೂಚಿಸಿದರು. ಬಿಜೆಪಿಯ ನಾಯಕ ಡಿ.ಎಚ್‌.ಶಂಕರಮೂರ್ತಿ ತಮ್ಮ ಪಕ್ಷದ ಹುದ್ದರಿಯನ್ನಾಗಿ ವಿಮಲಾಗೌಡ ಅವರ ಹೆಸರನ್ನು ಸೂಚಿಸಿದರು.

ವಿಧಾನ ಪರಿಷತ್ತಿನಲ್ಲಿ ಪಕ್ಷಗಳ ಬಲಾಬಲ :

ಕಾಂಗ್ರೆಸ್‌- 35, ಬಿಜೆಪಿ- 12, ಜಾತ್ಯತೀತ ಜನತಾದಳ-11, ಪ್ರಗತಿಪರ ಜನತಾದಳ-10, ಜನತಾದಳ-1, ಪಕ್ಷೇತರ-2, ಅಧ್ಯಕ್ಷರು-1, ಖಾಲಿ ಸ್ಥಾನ-3.

(ಪಿಟಿಐ)

ಮುಖಪುಟ / ವಾರ್ತೆಗಳು

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+