ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ವೈರಲ್ ಜ್ವರದ ಕಾಟ
ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ವೈರಲ್ ಜ್ವರದ ಕಾಟ
ಜ್ವರದ ತಾಪದಿಂದ ಕಾರ್ಯ ಕಲಾಪಗಳಿಗೆ ರಜೆ, ಕಡ್ಡಾಯ ವಿಶ್ರಾಂತಿ
ಪ್ರಧಾನಿ ವಾಜಪೇಯಿ ಅವರು ಲಘು ವೈರಲ್ ಜ್ವರದಿಂದ ಬಳಲುತ್ತಿದ್ದು , ಗುರುವಾರ (ಆ.07)ದ ಎಲ್ಲಾ ನಿಗದಿತ ಕಾರ್ಯಕ್ರಮಗಳನ್ನೂ ರದ್ದುಪಡಿಸಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಜ್ವರದ ತೀವ್ರತೆಯಿದ್ದರೂ, ಗುರುವಾರ ಬೆಳಗ್ಗೆ ಸಂಸತ್ ಕಲಾಪದಲ್ಲಿ ಪ್ರಧಾನಿ ಭಾಗವಹಿಸಿದ್ದ ರು. ಆಲಿಘರ್ ಮುಸ್ಲಿಂ ವಿಶ್ವ ವಿದ್ಯಾಲಯ ಕೋರ್ಟ್‌ಗೆ ಎಂಪಿ ನಾಮಕರಣ ಸಂಬಂಧದ ಮತದಾನದಲ್ಲಿ ಭಾಗವಹಿಸಿದ ನಂತರ ಪ್ರಧಾನಿ ಮನೆಗೆ ತೆರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಪ್ರಧಾನಿ ವಾಜಪೇಯಿಗೆ ವಯಸ್ಸಾಗಿದೆ. ಅವರು ವೃದ್ಧಾಪ್ಯದ ಬಳಲಿಕೆಯಿಂದ ಪದೇಪದೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಜಯಪಾಲ್‌ರೆಡ್ಡಿ ಇತ್ತೀಚೆಗಷ್ಟೇ ಸುದ್ದಿಗೋಷ್ಠಿಯಾಂದರಲ್ಲಿ ಕಟಕಿಯಾಡಿದ್ದರು. ಬಿಜೆಪಿ ಮಾತ್ರ ವಾಜಪೇಯಿ ನಾಯಕತ್ವದಲ್ಲಿ ನಂಬಿಕೆ ಕಳಕೊಂಡಿಲ್ಲ . ಮುಂದಿನ ಚುನಾವಣೆಯಲ್ಲೂ ವಾಜಪೇಯಿ ಅವರದೇ ಸಾರಥ್ಯ ಎಂದು ಬಿಜೆಪಿ ಈಗಾಗಲೇ ಪ್ರಕಟಿಸಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications