ಸರ್ಕಾರಿ ನೌಕರರಿಗೆ ಸಂಪು ಹೂಡುವ ಹಕ್ಕಿಲ್ಲ-ಸುಪ್ರಿಂಕೋರ್ಟ್
ಸರ್ಕಾರಿ ನೌಕರರಿಗೆ ಸಂಪು ಹೂಡುವ ಹಕ್ಕಿಲ್ಲ-ಸುಪ್ರಿಂಕೋರ್ಟ್
‘ಕಾರ್ಮಿಕ ಸಂಘಟನೆಗಳಿಗೂ ಇದು ಅನ್ವಯಿಸುತ್ತದೆ’
ತಮಿಳುನಾಡು ಸರ್ಕಾರಿ ನೌಕರರ ಸಂಪಿನ ಕುರಿತು ವಿಚಾರಣೆ ನಡೆಸಿದ ನಂತರ ಜಸ್ಟಿಸ್ ಎಂ.ಬಿ.ಶಾ ಮತ್ತು ಜಸ್ಟಿಸ್ ಎ.ಆರ್.ಲಕ್ಷ್ಮಣನ್ ಅವರನ್ನೊಳಗೊಂಡ ನ್ಯಾಯಪೀಠ ಬುಧವಾರ ಕೊಟ್ಟ (ಆ. 6) ತೀರ್ಪಿನಲ್ಲಿ ಈ ಮಹತ್ವದ ವಿಷಯವನ್ನು ಘೋಷಿಸಿತು. ಕಾರ್ಮಿಕ ಸಂಘಟನೆಗಳಿಗೆ ಕೂಡ ಸಾಮೂಹಿಕ ಚೌಕಾಸಿ (collective bargaining) ಮಾಡುವ ಹಕ್ಕಿದೆಯೇ ವಿನಾ ಮುಷ್ಕರ ಹೂಡುವ ಹಕ್ಕಿಲ್ಲ ಎಂದು ಪೀಠ ತೀರ್ಪಿನಲ್ಲಿ ಹೇಳಿತು.
ತಮಿಳುನಾಡು ಸರ್ಕಾರ ಸಂಪು ಹೂಡಿದ್ದ 1.76 ಲಕ್ಷ ಸರ್ಕಾರಿ ನೌಕರರನ್ನು ಎಸ್ಮಾ ಜಾರಿಗೊಳಿಸಿ, ಕೆಲಸದಿಂದ ಕಿತ್ತೆಸೆದಿತ್ತು. ಆಮೇಲೆ ಇನ್ನು ಮುಂದೆ ಯಾವುದೇ ಮುಷ್ಕರ ಹೂಡುವುದಿಲ್ಲ ಎಂದು 1 ಲಕ್ಷದ 56 ಸಾವಿರದ 106 ನೌಕರರು ಬರೆದುಕೊಟ್ಟ ನಂತರ ಕೆಲಸಕ್ಕೆ ವಾಪಸ್ಸು ಸೇರಿಸಿಕೊಳ್ಳಲಾಗಿತ್ತು. ಉಳಿದ 14, 135 ನೌಕಕರಲ್ಲಿ 8,063 ನೌಕರರನ್ನು ಕೆಲಸಕ್ಕೆ ಸೇರಿಸಿಕೊಳ್ಳುವುದಾಗಿ ಮಂಗಳವಾರ (ಆ. 5) ಸರ್ಕಾರ ಹೇಳಿತು.
ಸಂಪು ಹೂಡುವುದರಿಂದ ಸಾರ್ವಜನಿಕ ಆಡಳಿತಕ್ಕೆ ತೊಂದರೆಯಾಗುತ್ತದೆ. ಸಮಸ್ಯೆ ಪರಿಹರಿಸಿಕೊಳ್ಳಲು ಬೇರೆ ಬೇರೆ ದಾರಿಗಳಿವೆ ಎಂದು ಸುಪ್ರಿಂಕೋರ್ಟ್ ಪೀಠ ನೌಕರರಿಗೆ ಕಿವಿಮಾತು ಹೇಳಿತು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications