ಆರಂಬೋಡಿಯಲ್ಲಿ ಮಿನಿ ಹೈಡೆಲ್ ಯೋಜನೆಗೆ ಸರಕಾರ ಅಸ್ತು
ಆರಂಬೋಡಿಯಲ್ಲಿ ಮಿನಿ ಹೈಡೆಲ್ ಯೋಜನೆಗೆ ಸರಕಾರ ಅಸ್ತು
15 ಮೆಗಾವ್ಯಾಟ್‌ನ ಹೈಡೆಲ್ ಯೋಜನೆ ಕಾಮಗಾರಿ ಸದ್ಯವೇ ಆರಂಭ
5 ಮೆಗಾ ವ್ಯಾಟ್ ಸಾಮರ್ಥ್ಯದ ಒಟ್ಟು ಮೂರು ಹೈಡೆಲ್ ಘಟಕಗಳನ್ನು ಸ್ಥಾಪಿಸಲಿದ್ದು, ವಾರ್ಷಿಕ 45 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಈ ಯೋಜನೆಯನ್ನು ಬೊಬ್ಬ ವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳಲಿದೆ ಎಂದು ಯೋಜನೆಯ ಅಧ್ಯಕ್ಷ ಬಿ. ಎಸ್. ಬೊಬ್ಬ ಬುಧವಾರ (ಆ.6) ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಸರಣವೂ ಸೇರಿದಂತೆ ಯೋಜನೆಯ ಒಟ್ಟು ವೆಚ್ಚ 57.21 ಕೋಟಿ ರೂಪಾಯಿ. ಇನ್ನು ಹದಿನೆಂಟು ತಿಂಗಳಲ್ಲಿ ಯೋಜನೆಯ ಕಾಮಗಾರಿ ಮುಗಿಯುವ ನಿರೀಕ್ಷೆಯಿದೆ. 6. 36 ಹೆಕ್ಟೇರು ವಿಸ್ತಾರ ಪ್ರದೇಶದಲ್ಲಿ ಯೋಜನೆಯು ಹರಡಿಕೊಳ್ಳಲಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications