2006ರಲ್ಲಿ 1,96,105 ಕೋಟಿ ರು. ಐಟಿ ವಹಿವಾಟು ನಿರೀಕ್ಷೆ

2006ರಲ್ಲಿ 1,96,105 ಕೋಟಿ ರು. ಐಟಿ ವಹಿವಾಟು ನಿರೀಕ್ಷೆ
ಪ್ರಾದೇಶಿಕ ಹಾಗೂ ರಫ್ತು ಮಾರುಕಟ್ಟೆಯಲ್ಲಿ ಗಣನೀಯ ಪ್ರಗತಿ

ಬೆಂಗಳೂರು : ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಹಿವಾಟು 2006 ನೇ ಇಸವಿಯ ವೇಳೆಗೆ 1 ಲಕ್ಷ 96 ಸಾವಿರದ 105 ಕೋಟಿ ರುಪಾಯಿ ಮುಟ್ಟುತ್ತದೆಂದು ‘ಐಡಿಸಿ’ ಅಂದಾಜು ಮಾಡಿದೆ.

ಪ್ರತಿವರ್ಷ ಪ್ರತಿಶತ 27.9ರ ಪ್ರಗತಿ ಐಟಿ ಮಾರುಕಟ್ಟೆಯಲ್ಲಿ ದಾಖಲಾಗಲಿದೆ. ಇದರಿಂದಾಗಿ 2006ನೇ ಇಸವಿಯ ವೇಳೆಗೆ ಭಾರತದ ಐಟಿ ಕ್ಷೇತ್ರದ ಒಟ್ಟು ವಹಿವಾಟು 1,96,105 ಕೋಟಿ ರುಪಾಯಿಗೆ ಮುಟ್ಟಲಿದೆ. ಈ ಮೊತ್ತ ಪ್ರಾದೇಶಿಕ ಹಾಗೂ ರಫ್ತು ವಹಿವಾಟು ಎರಡನ್ನೂ ಒಳಗೊಂಡಿದೆ ಎಂದು ‘ಐಡಿಸಿ’ಯ ಮಾರುಕಟ್ಟೆ ಸಂಶೋಧನೆ ಮತ್ತು ಸಲಹಾ ಘಟಕ ತಿಳಿಸಿದೆ. 2002ನೇ ಇಸವಿಯಿಂದ 2006ರವರೆಗೆ ಐಟಿ ಮಾರುಕಟ್ಟೆಯ ಕುರಿತು ಐಡಿಸಿ ಸಮೀಕ್ಷೆ ನಡೆಸಿದೆ.

ಪ್ರಸಕ್ತ ವರ್ಷದಲ್ಲಿ ಐಟಿ ಪ್ರಾದೇಶಿಕ ಮಾರುಕಟ್ಟೆಯಲ್ಲಿ ಗಣನೀಯ ಸಾಧನೆ ಕಂಡುಬರಲಿದೆ. ಪ್ರತಿಶತ 16 ರಷ್ಟು ಪ್ರಗತಿಯನ್ನು ಪ್ರಾದೇಶಿಕ ಮಾರುಕಟ್ಟೆಯಲ್ಲಿ ನಿರೀಕ್ಷಿಸಬಹುದು. ಮುಂದಿನ ನಾಲ್ಕು ವರ್ಷಗಳಲ್ಲಿ ಈ ಸಾಧನೆ ಮುಂದುವರಿಯಲಿದ್ದು , 2006ರ ವೇಳೆಗೆ ಮಾರುಕಟ್ಟೆಯ ವಹಿವಾಟು 55,925 ಕೋಟಿ ಮುಟ್ಟಲಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉತ್ಪನ್ನಗಳ ರಫ್ತು ಹಾಗೂ ಸೇವೆಗಳಿಂದಾಗಿ ಕೂಡ ಐಟಿ ಮಾರುಕಟ್ಟೆಯು ಪ್ರಗತಿ ಹೊಂದಲಿದೆ. 2006ನೇ ಇಸವಿಯ ಹೊತ್ತಿಗೆ ರಫ್ತು ಮಾರುಕಟ್ಟೆ ಶೇ.71ರ ಪ್ರಗತಿ ಸಾಧಿಸಲಿದೆ ಎಂದು ‘ಐಡಿಸಿ’ ಹೇಳಿದೆ.

(ಪಿಟಿಐ)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+