ಒರ್ಯಾಕಲ್ ವಿರುದ್ಧ ಭಾರತೀಯಳಿಂದ ಲೈಂಗಿಕ ಶೋಷಣೆ ಕೇಸು
ಒರ್ಯಾಕಲ್ ವಿರುದ್ಧ ಭಾರತೀಯಳಿಂದ ಲೈಂಗಿಕ ಶೋಷಣೆ ಕೇಸು
‘ಕಂಪನಿಯ ಮಾಜಿ ಸೂಪರ್‌ವೈಸರ್ ಪದೇಪದೇ ಲೈಂಗಿಕ ಕಿರುಕುಳ ಕೊಟ್ಟ’
ಕ್ಯಾಲಿಫೋರ್ನಿಯಾ ಸುಪೀರಿಯರ್ ಕೋರ್ಟಿನಲ್ಲಿ ಹೆಂಗಸು ದಾಖಲಿಸಿರುವ ದೂರು ಇಂತಿದೆ- ಸೂಪರ್‌ವೈಸರ್ ಕಿರುಕುಳ ಕೊಟ್ಟ. ಅದರ ಬಗ್ಗೆ ಕಂಪನಿಗೆ ದೂರು ಕೊಟ್ಟೆ. ಆತ ತಾಂತ್ರಿಕ ಪರಿಣತ ಹಾಗೂ ಉನ್ನತ ಅಧಿಕಾರಿ. ಅನುಭವ ಬೇರೆ ಆಗಿತ್ತು. ಕಂಪನಿ ಆತನನ್ನು ಕಳೆದುಕೊಳ್ಳಲು ಸಿದ್ಧವಿರಲಿಲ್ಲ. ಆದರೆ, ತೊಂದರೆ ಅನುಭವಿಸಿದ್ದು ನಾನು. ಕಂಪನಿಯ ಇಂಥ ನಡಾವಳಿ ತಕ್ಕುದ್ದಲ್ಲ.
ತನ್ನ ಹೆಸರನ್ನು ಗುಟ್ಟಾಗಿಡುವ ಕಾರಣಕ್ಕೆ ಕೇಸು ಹಾಕಿರುವ ಹೆಂಗಸು ಬಾರ್ಬರ ಡೋ ಎಂದು ಹೆಸರು ಬದಲಿಸಿ ಬರೆದಿದ್ದಾರೆ. 33 ವಯಸ್ಸಿನ ಈಕೆಯನ್ನು ಕಂಪನಿಯ ಸ್ಯಾನ್ ಮ್ಯಾಟೋ ಕಚೇರಿಗೆ 2000ನೇ ಇಸವಿಯಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು. ಈಕೆ ದೂರು ಕೊಟ್ಟಿರುವುದು ಮಹೇಶ್ ಆನಂದ್ ವಿರುದ್ಧ. ಸದ್ಯಕ್ಕೆ ಈತ ಕಂಪನಿಯನ್ನು ಬಿಟ್ಟಿರುವುದರಿಂದ ನೇರವಾಗಿ ಕಂಪನಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಅಹವಾಲಿನಲ್ಲಿ ಬರೆದಿದ್ದಾರೆ.
ಯಾವ ನೌಕರರ ಸಮಸ್ಯೆಯನ್ನೂ ಕಂಪನಿ ಕಡೆಗಣಿಸುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಕಂಪನಿ ಸರಿಯಾಗೇ ವರ್ತಿಸಿದೆ. ವಿನಾ ಕಾರಣ ಕೇಸನ್ನು ಹಾಕಲಾಗಿದೆ ಎಂದು ಒರ್ಯಾಕಲ್‌ನ ಸಾರ್ವಜನಿಕ ಸಂಪರ್ಕ ವಿಭಾಗದ ಉಪಾಧ್ಯಕ್ಷ ಜೆನ್ನಿಫರ್ ಗ್ಲಾಸ್ ಇಂಡಿಯಾ ವೆಸ್ಟ್ ಪೇಪರ್‌ನಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
(ಪಿಟಿಐ)
ಮುಖಪುಟ / ಐಟಿ - ಬಿಟಿ












Click it and Unblock the Notifications