ಮೊಬೈಲ್ ಫೋನ್‌ನಲ್ಲಿ ಬಾಳ ಸಂಗಾತಿಯ ಹುಡುಕಾಟ
ಮೊಬೈಲ್ ಫೋನ್‌ನಲ್ಲಿ ಬಾಳ ಸಂಗಾತಿಯ ಹುಡುಕಾಟ
ಮೊಬೈಲ್ ಫಸ್ಟ್ ನಿಂದ ‘ಮೊಬೈಲ್‌ನಲ್ಲಿ ಲೈಫ್ ಪಾರ್ಟ್‌ನರ್ ಮ್ಯಾಟ್ರಿಮೋನಿಯಲ್’ ಸೇವೆ
ಎಸ್ಕೋಟೆಲ್, ಬಿಪಿಎಲ್ ಮೊಬೈಲ್, ಆರ್‌ಪಿಜಿ ಸೆಲ್ಯುಲರ್ ಹಾಗೂ ರಾಜ್ಯದಲ್ಲಿ ಸೆಲ್ಯುಲರ್ ಸೇವೆ ಒದಗಿಸುತ್ತಿರುವ ಸ್ಪೈಸ್ ಟೆಲಿಕಾಂ ಜೊತೆ ಒಗ್ಗೂಡಿ ದೇಶಾದ್ಯಂತ ಇರುವ ತಮ್ಮ 30 ಲಕ್ಷ ಮೊಬೈಲ್ ಗ್ರಾಹಕರಿಗೆ ವೈವಾಹಿಕ ಸೇವಾ ಮಾಹಿತಿ ನೀಡಲಿದೆ.
ಕಡಿಮೆ ದರದಲ್ಲಿ ಮತ್ತು ಸುಲಭವಾಗಿ ಮೊಬೈಲ್ ಗ್ರಾಹಕ ತನ್ನ ಬಾಳಸಂಗಾತಿಯನ್ನು ಹುಡುಕಿಕೊಳ್ಳಬಹುದು. ಅಲ್ಲದೆ ಕಡಿಮೆ ದರದಲ್ಲಿ ಮ್ಯಾಟ್ರಿಮೋನಿಯಲ್ ಜಾಹೀರಾತನ್ನು ಮೊಬೈಲ್ ಮುಖಾಂತರ ನೀಡಬಹುದು. ಈ ಜಾಹೀರಾತು ವಿವಿಧ ರಾಜ್ಯಗಳಲ್ಲಿ ಹಾಗೂ ಮೆಟ್ರೋ ಸಿಟಿಗಳಿಗೂ ತಲುಪಲಿರುವುದರಿಂದ ಕಡಿಮೆ ದರಕ್ಕೆ ಹೆಚ್ಚು ವಿಸ್ತಾರವನ್ನು ತಲುಪುವ ಅವಕಾಶವಿದೆ ಎಂದು ಬಿಪಿಎಲ್ ಮೊಬೈಲ್‌ನ ಸಿಇಒ ಎಫ್. ಬಿ. ಕಾರ್ಡೊಸೊ ಅಭಿಪ್ರಾಯಪಡುತ್ತಾರೆ.
ದೇಶಾದ್ಯಂತ ಸೆಲ್ಯುಲರ್ ಸೇವೆ ಒದಗಿಸುತ್ತಿರುವ ಏರ್‌ಟೆಲ್, ಬಿಎಸ್‌ಎನ್ನೆಲ್ ಹಾಗೂ ಎಂಟಿಎನ್‌ಎಲ್‌ನಿಂದ ಉಂಟಾಗಿರುವ ಪೈಪೋಟಿಯನ್ನು ಈ ನಾಲ್ಕು ಕಂಪೆನಿಗಳು ಒಗ್ಗೂಡಿ ಎದುರಿಸಲು ನಿರ್ಧರಿಸಿ ಈ ಹೊಸೆ ಸೇವೆಯನ್ನು ಆರಂಭಿಸುತ್ತಿವೆ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications