ಆಗಸ್ಟ್‌ 7ರಂದು ಸಂಸತ್‌ನಲ್ಲಿ ಬಿಸ್ಮಿಲ್ಲಾ ಖಾನ್‌ ಶಹನಾಯಿ ವಾದನ

ಆಗಸ್ಟ್‌ 7ರಂದು ಸಂಸತ್‌ನಲ್ಲಿ ಬಿಸ್ಮಿಲ್ಲಾ ಖಾನ್‌ ಶಹನಾಯಿ ವಾದನ
ಖಾನ್‌ಗೆ ಸೂಕ್ತ ಸನ್ಮಾನ ಮಾಡಲು ಸಂಸದರ ಆಗ್ರಹ

ನವದೆಹಲಿ: ಪ್ರಸಿದ್ಧ ಶಹನಾಯ್‌ ವಾದಕ ಬಿಸ್ಮಿಲ್ಲಾ ಖಾನ್‌ ಅವರು ಆಗಸ್ಟ್‌ 7ರಂದು ಸಂಸತ್‌ ಭವನದಲ್ಲಿ ಶಹನಾಯಿ ವಾದನ ಕಾರ್ಯಕ್ರಮ ನೀಡಲಿದ್ದಾರೆ.

ಬಿಸ್ಮಿಲ್ಲಾ ಖಾನ್‌ಗೆ ಈಗ 87ರ ಪ್ರಾಯ. ಇತ್ತೀಚೆಗಷ್ಟೇ ಕೈ ಕೊಟ್ಟ ಆರೋಗ್ಯ ಹಾಗೂ ಆರ್ಥಿಕ ಮುಗ್ಗಟ್ಟಿನಿಂದಾಗಿ ಖಾನ್‌ ಸುದ್ದಿ ಮಾಡಿದ್ದರು. ತಮ್ಮ ಕುಟುಂಬ ಬದುಕುವುದು ಕಷ್ಟವಾಗುತ್ತಿದೆ. ಸರಕಾರ ವರ್ಷಕ್ಕೆ ಕನಿಷ್ಠ ಎರಡು ಕಾರ್ಯಕ್ರಮಗಳನ್ನಾದರೂ ನೀಡಿ ನೆರವಾಗಬೇಕು ಎಂದು ಮಾಧ್ಯಮಗಳ ಮೂಲಕ ಖಾನ್‌ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದರು.

ಸಂಸತ್‌ನಲ್ಲಿ ಯಾವುದೇ ಗೌರವ ಧನವನ್ನು ಅಪೇಕ್ಷಿಸದೆಯೇ ಶಹನಾಯಿ ನುಡಿಸುವ ಇಚ್ಛೆಯನ್ನು ಖಾನ್‌ ವ್ಯಕ್ತಪಡಿಸಿದ್ದಾರೆ. ಆದರೆ ಅನೇಕ ಸಂಸದರು ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಅವರಿಗೆ ಸೂಕ್ತ ಸನ್ಮಾನ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+