ಕರ್ನಾಟಕದಲ್ಲಿ 36 ಸಾವಿರದ 918 ಮಂದಿಗೆ ಮಲೇರಿಯಾ ಜ್ವರ
ಕರ್ನಾಟಕದಲ್ಲಿ 36 ಸಾವಿರದ 918 ಮಂದಿಗೆ ಮಲೇರಿಯಾ ಜ್ವರ
ಬೆಂಗಳೂರು : ರಾಜ್ಯದಲ್ಲಿ 36,918 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಮಂಗಳವಾರ (ಜು.22) ವಿಧಾನ ಪರಿಷತ್‌ನಲ್ಲಿ ಹೇಳಿದರು.ಕಾಂಗ್ರೆಸ್‌ನ ನಿರ್ಮಲಾ ಅವರ ಪ್ರಶ್ನೆಗೆ ಉತ್ತರಿಸುತ್ತಿದ್ದ ಸಚಿವರು, 89 ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮಲೇರಿಯಾ ವ್ಯಾಪಕವಾಗಿರುವುದು ಗೊತ್ತಾಗಿದೆ. ರೋಗದ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಸ್ಥಳೀಯ ಆಡಳಿತಗಳಿಗೆ ಸೂಚಿಸಿದ್ದೇವೆ ಎಂದರು.
ಈಗಾಗಲೇ ವ್ಯಾಪಕವಾಗಿರುವ ಡೆಂಗ್ಯೂ ನಿಯಂತ್ರಣದ ಜೊತೆಗೆ ಈಗ ಮಲೇರಿಯಾ ಕಾಟ ಬೇರೆ ಕಾಣಿಸಿಕೊಂಡಿದೆ. ರಾಜ್ಯದ ಆರೋಗ್ಯ ಖಂಡಿತ ಸರಿಯಾಗಿಲ್ಲ.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications