ರಾಬ್ಡಿದೇವಿ ಮನೆಗೆ 17ಲಕ್ಷ ರುಪಾಯಿ ಟೀ-ಸ್ನ್ಯಾಕ್ಸು ಸರಬರಾಜು
ರಾಬ್ಡಿದೇವಿ ಮನೆಗೆ 17ಲಕ್ಷ ರುಪಾಯಿ ಟೀ-ಸ್ನ್ಯಾಕ್ಸು ಸರಬರಾಜು
ಈ ಸರ್ಕಾರಿ ಟೀ- ಬಿಸ್ಕತ್ತಿನ ಹಣವನ್ನು ಕೊಡಬೇಕಾದವರಿಗೆ ಇನ್ನೂ ಕೊಟ್ಟಿಲ್ಲ
ಕೇವಲ 17 ಲಕ್ಷ ರುಪಾಯಿ !
ಮೊನ್ನೆ ಬಿಹಾರ ವಿಧಾನಸಭೆಯಲ್ಲಿ ಈ 17 ಲಕ್ಷ ರುಪಾಯಿಯ ಪ್ರಸ್ತಾಪ ಬರಲು ಕಾರಣ- ಈ ಬಿಲ್ಲನ್ನು ಮಾನ್ಯ ಮುಖ್ಯಮಂತ್ರಿಗಳು ಇನ್ನೂ ಪಾವತಿಸಿಲ್ಲ. ಬಿಜೆಪಿಯ ಗಿರಿರಾಜ್ ಸಿಂಗ್ ರಾಬ್ಡಿ ಮತ್ತು ಸ್ನೇಹಿತರು ಕುಡಿದ ಟೀ ಬೆಲೆಯನ್ನು ಸದನದ ಗಮನಕ್ಕೆ ತಂದರೆ, ಕಾರ್ಮಿಕ ಸಚಿವ ಉಪೇಂದ್ರ ಪ್ರಸಾದ್ ವರ್ಮಾ ಬಿಲ್ಲು ಸಂದಾಯವಾಗದ ವಿಚಾರ ಹೇಳಿದರು.
ಕೊನೆಗೆ ಸದನದಲ್ಲಿರುವವರೆಲ್ಲಾ ಲೆಕ್ಕ ಹಾಕಲಾಗಿ, ದಿನವೊಂದಕ್ಕೆ ರಾಬ್ಡಿದೇವಿಯವರ ಮನೆಗೆ ಮತ್ತು ಕಚೇರಿಗೆ ಸರಬರಾಜಾಗಿರುವ ಟೀ ಹಾಗೂ ಬಿಸ್ಕತ್ತಿನ ಬೆಲೆ ಕೇವಲ 157 ಚಿಲ್ಲರೆ ರುಪಾಯಿ ಅನ್ನೋದು ಗೊತ್ತಾಯಿತು! ಇಷ್ಟೆಲ್ಲ ಹೇಳಿ, ‘ನನಗೆ ಮುಖ್ಯಮಂತ್ರಿ ಮೇಲಾಗಲೀ ಅಥವಾ ಲಲ್ಲೂ ಯಾದವ್ ಮೇಲಾಗಲಿ ವೈಯಕ್ತಿಕ ದ್ವೇಷವಿಲ್ಲ. ಒಂದು ಸರ್ಕಾರ ಎಷ್ಟು ಕೆಟ್ಟದಾಗಿ ಸವಲತ್ತನ್ನು ಬಳಸಿಕೊಳ್ಳುತ್ತದೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ಅದನ್ನು ಎಲ್ಲರ ಗಮನಕ್ಕೆ ತಂದೆ ಅಷ್ಟೆ ’ ಎಂದು ಗಿರಿರಾಜ್ ಸಿಂಗ್ ಹೇಳಿದಾಗ ರಾಬ್ಡಿದೇವಿಯವರ ಮುಖ ಕಪ್ಪಿಟ್ಟಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications