ಅಲ್ಯುಮಿನಿಯಂ ಕ್ಯಾನು ತುಂಬಲಿದೆ ಎಳನೀರು

ಅಲ್ಯುಮಿನಿಯಂ ಕ್ಯಾನು ತುಂಬಲಿದೆ ಎಳನೀರು
ಬೆಂಗಳೂರಿನಂಥಾ ಗಿಜಿಗಿಜಿ ನಗರಿಯಲ್ಲಿ ಎಳನೀರೊಂದಕ್ಕೆ 10 ರುಪಾಯಿಯಾದರೂ ಡಿಮ್ಯಾಂಡು ತಗ್ಗಿಲ್ಲ. ದೇಹಕ್ಕೆ ತಂಪೆರೆವ ಇಂಥಾ ನಾರೀಕೇಳ ನೀರು ಕೆಲವೇ ತಿಂಗಳಲ್ಲಿ ಕೋಲಾ ಥರ ಕ್ಯಾನಲ್ಲಿ ಸಿಗಲಿದೆ.

ಕೋಲಾ ಕೋಲಾಹಲದ ಭರಾಟೆಗೆ ಎಳನೀರಿನ ಸೆಡ್ಡು. ಇನ್ನು ಕೆಲವೇ ತಿಂಗಳಲ್ಲಿ ಯಾವುದೇ ತಂಪು ಪಾನೀಯ ಮಾರುವ ಅಂಗಡಿಗೆ ಹೋಗಿ, ಎಳನೀರಿನ ಕ್ಯಾನನ್ನು ಕೊಂಡು ತರುವ ಅವಕಾಶವನ್ನು ಗಿರಾಕಿಗಳಿಗೆ ದಕ್ಕಿಸಿಕೊಡುವ ಯತ್ನಕ್ಕೆ ಹರಳಿನ ರೂಪ ಸಿಕ್ಕಿದೆ. ಸೆಪ್ಟೆಂಬರ್‌ ಹೊತ್ತಿಗೆ ಪಶ್ಚಿಮ ಬಂಗಾಳದಲ್ಲಿ ಕೋಲಾ ಕುಡಿವ ಮಂದಿ ಕೈಗೆ ಎಳನೀರು ಕ್ಯಾನುಗಳು ಬಂದರೂ ಅಚ್ಚರಿ ಪಡಬೇಕಾಗಿಲ್ಲ.

ಪಶ್ಚಿಮ ಬಂಗಾಳದ ಹಸ್ನಾಬಾದ್‌ನಲ್ಲಿ ಒಂದು ಪ್ಲಾಂಟ್‌ ಹಾಕಿ, ಅಲ್ಲಿ ಅಲ್ಯುಮಿನಿಯಂ ಕ್ಯಾನುಗಳಲ್ಲಿ ಎಳನೀರು ತುಂಬಿಸಿಡುವ ಕಾಯಕ ಮಾಡಲಾಗುತ್ತದೆ. ತೆಂಗು ಅಭಿವೃದ್ಧಿ ಮಂಡಳಿ, ಡಿಫೆನ್ಸ್‌ ಫುಡ್‌ ರಿಸರ್ಚ್‌ ಲ್ಯಾಬೊರೇಟರಿ (ಡಿಎಫ್‌ಆರ್‌ಎಲ್‌) ಮತ್ತು ಅವಧೂತ್‌ ಆ್ಯಗ್ರೋ ಲಿಮಿಟೆಡ್‌ ನಡುವೆ ಈ ನಿಟ್ಟಿನಲ್ಲಿ ಈಗಾಗಲೇ ಒಂದು ಒಡಂಬಡಿಕೆಯಾಗಿದೆ. ಎಳನೀರನ್ನು ದೀರ್ಘ ಕಾಲ ಕೆಡದಂತೆ ಕ್ಯಾನಿನಲ್ಲಿ ತುಂಬಿಸಿಡುವ ತಂತ್ರಜ್ಞಾನ ಕೂಡ ಗೊತ್ತಾಗಿದೆ. ಇನ್ನೇನಿದ್ದರೂ ಎಳನೀರನ್ನು ಕ್ಯಾನಿಗೆ ತುಂಬಿಸುವುದೊಂದೇ ಬಾಕಿ.

Canned coconut water to enter marketsಎಳನೀರನ್ನು ಕ್ಯಾನುಗಳಲ್ಲಿ ತುಂಬಿಸಿ, ಕೆಡದಂತೆ ಕಾಪಿಡುವ ತಂತ್ರಜ್ಞಾನವನ್ನು ಡಿಎಫ್‌ಆರ್‌ಎಲ್‌ ಸಂಶೋಧನೆ ಮಾಡಿದೆ. ಈ ತಂತ್ರಜ್ಞಾನವನ್ನು ಉಪಯೋಗಕ್ಕೆ ತರುವ ಕೆಲಸವನ್ನು ಅವಧೂತ್‌ ಆ್ಯಗ್ರೋ ಲಿಮಿಟೆಡ್‌ ಮಾಡಲಿದೆ. ಇದಕ್ಕೆ ಠಸ್ಸೆ ಒತ್ತಿ, ಗ್ರಾಹಕರಿಗೆ ಇದು ಎಳನೀರೇ ಹೌದು ಅಂತ ಹೇಳಲು ತೆಂಗು ಅಭಿವೃದ್ಧಿ ಮಂಡಳಿಯಿದೆ.

ಈ ರೀತಿ ಕ್ಯಾನಿಗೆ ತುಂಬಿಸಲಾಗುವ ಎಳನೀರಿಗೆ 9 ತಿಂಗಳ ಕಾಲದ ಬದುಕು. ಅಲ್ಲಿಯವರೆಗೆ ಎಳನೀರು ಫ್ರೆಷ್ಷಾಗೇ ಇರುತ್ತದೆ ಅಂತ ಡಿಎಫ್‌ಆರ್‌ಎಲ್‌ ಆಶ್ವಾಸನೆ ಕೊಡುತ್ತದೆ. ಈ ಯೋಜನೆಯ ಮೊದಲ ಹಂತಕ್ಕೆ 2.5 ಕೋಟಿ ರುಪಾಯಿ ಖರ್ಚಾಗಬಹುದೆಂದು ಮಂಡಳಿ ಅಂದಾಜು ಮಾಡಿದೆ. ಪಶ್ಚಿಮ ಬಂಗಾಳದಲ್ಲಿ 1100 ಎಕರೆಯಲ್ಲಿ 15 ಲಕ್ಷ ತೆಂಗಿನ ಮರಗಳಿವೆ. ಈ ಮರಗಳು ಪ್ರತಿನಿತ್ಯ 2 ಕೋಟಿ 30 ಸಾವಿರ ಎಳನೀರುಗಳನ್ನು ಕೊಡುತ್ತವೆ. ಕ್ಯಾನಿಗೆ ತುಂಬಿಸಲು ಪ್ರತಿದಿನ 25 ಸಾವಿರ ಎಳನೀರು ಬೇಕಾಗುತ್ತವಷ್ಟೆ. ಯೋಜನೆ ಯಶಸ್ವಿಯಾದರೆ ಮುಂದೆ ಇದನ್ನೊಂದು ದೊಡ್ಡ ಉದ್ದಿಮೆಯಾಗಿಸುವುದು ಉಮೇದಿ.

ಹೊಸ ಬೆಳವಣಿಗೆ- ಕ್ಯಾನಿಗೆ ಎಳನೀರನ್ನು ತುಂಬಿಸಿ ಮಾರುವ ಐಡಿಯಾ ಕೇಳಿ ಕೊಲ್ಲಿ ರಾಷ್ಟ್ರಗಳ ಕಿವಿಯರಳಿವೆ. ನಮಗೂ ಕ್ಯಾನುಗಳನ್ನು ಕಳಿಸಿಕೊಡಿ ಅಂತ ಅವು ಕೇಳುತ್ತಿರುವುದರಿಂದ, ತೆಂಗು ಅಭಿವೃದ್ಧಿ ಮಂಡಳಿ ಕ್ಯಾನುಗಳ ರಫ್ತಿನ ವ್ಯವಹಾರದ ಸಿದ್ಧತೆ ನಡೆಸಿದೆ.

ಬೊಂಡೆ ಮೇಳ ಮಾಡಿ ಎಳನೀರು ಕುಡಿಸುವ, ನುಸಿ ರೋಗದಿಂದ ಹೈರಾಣಾದ ಮರಗಳಿಂದ ನೀರಾ ಇಳಿಸಿಯೂ ಕಾಸು ಹುಟ್ಟದೆ ಕಂಗಾಲಾದ ಕರ್ನಾಟಕದಲ್ಲಿ ಈ ರೀತಿ ಕ್ಯಾನಿಗೆ ಎಳನೀರು ತುಂಬಿಸುವ ಉದ್ದಿಮೆ ಬಂದರೆ ?

ಕೋಲಾ ವಗೈರೆ ಕಂಪನಿಗಳು ಬೊಂಡೆನೀರು ಕ್ಯಾನು ತುಂಬುವ ಸಾಹಸಕ್ಕೆ ಹೇಗೆ ಪ್ರತಿಕ್ರಿಯಿಸುವರೋ ನೋಡಬೇಕು.

(ಏಜೆನ್ಸೀಸ್‌)

Post your views

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+