ಕಣ್ಣಂಚಿನ ಕಪ್ಪುಕಲೆ ನಿವಾರಣೆಗೆ ಮದ್ದು
ಕಣ್ಣಂಚಿನ ಕಪ್ಪುಕಲೆ ನಿವಾರಣೆಗೆ ಮದ್ದು
ಚೆಂದದ ಕಣ್ಣುಗಳು ಅಂತರಂಗದ ಕನ್ನಡಿ
ಸುಂದರವಾಗಿ ಕಾಣಿಸಬೇಕು ಅಥವಾ ಲಕ್ಷಣವಾಗಿರಬೇಕು ಎಂಬಾಸೆಗೆ ಕಣ್ಣುಗಳ ಕೆಳಗಿರುವ ಕಪ್ಪು ಕಲೆಗಳು ಕಿರಿಕಿರಿ ಮಾಡುತ್ತವೆಯೇ ? ಇಲ್ಲಿದೆ ಕೆಲವು ಟಿಪ್ಸ್.- ಕಣ್ಣ ಕೆಳ ಭಾಗಕ್ಕೆ ಹಾಗೂ ನೆತ್ತಿಗೆ ಶುದ್ಧ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಿ. ನೆತ್ತಿ ತಂಪಾಗಿರಲಿ.
- ಬಾದಾಮಿಯನ್ನು ನೀರಿನಲ್ಲಿ ನೆನೆಸಿ ನಂತರ ಕಲ್ಲಿನ ಮೇಲೆ ತೇಯ್ದು ಅದನ್ನು ಕಣ್ಣಿನ ಕೆಳಭಾಗಕ್ಕೆ ಹಚ್ಚಿ.
- ಮಳೆ ಬರುವಾಗ ಬೀಳುವ ಆಲಿ ಕಲ್ಲನ್ನು ಕಣ್ಣ ಕೆಳಗಿರಿಸಿ.
- ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಸಿಪ್ಪೆ ಸಮೇತ ತುರಿದು, ಕಿವಿಚಿ, ಅದನ್ನು ಕಣ್ಣಿನ ಕಪ್ಪು ಕಲೆಗಳಿಗೆ ಹಚ್ಚಿ. ಹತ್ತು ನಿಮಿಷದ ನಂತರ ಮುಖ ತೊಳೆಯಿರಿ.
- ಕಪ್ಪು ಕಲೆಗಳಿವೆ ಎಂಬ ಕಾರಣಕ್ಕೇ ಜಾಹೀರಾತಿನಲ್ಲಿ ಬರುವ ತರಾವಳಿಯ ಸೋಪುಗಳನ್ನು ಬಳಸಬೇಡಿ. ದೈನಂದಿನ ಕೆಲಸ- ದುಡಿಮೆಗೆ ಅನುಗುಣವಾಗಿ ಸಾಕಷ್ಟು ನಿದ್ದೆ ಮಾಡದೇ ಇದ್ದರೂ ಕಣ್ಣ ಕೆಳಗೆ ಕಪ್ಪು ಕರೆ ಕಾಣಿಸಿಕೊಳ್ಳಬಹುದು. ಅದಕ್ಕೆ ನಿದ್ದೆಯೇ ಮದ್ದು ವಿನಃ ಕ್ರೀಮು ಸೋಪುಗಳಲ್ಲ.
- ಯಾವುದೋ ಕಾರಣಕ್ಕೆ ನೀವು ಸಿಕ್ಕಾಪಟ್ಟೆ ಅತ್ತಿದ್ದರೂ ಒಂದೆರಡು ದಿನ ಕಣ್ಣ ಕೆಳಗೆ ಕಪ್ಪು ಗೆರೆಗಳು ಮೂಡಬಹುದು. ಈ ಗೆರೆ ತನ್ನಿಂದ ತಾನಾಗಿಯೇ ನಿವಾರಣೆಯಾಗುತ್ತದೆ. ಒಂದೆರಡು ಗಂಟೆಗಳ ಕಾಲ ಕಣ್ಣು ತುಂಬ ನಿದ್ದೆ ಮಾಡಿದರೆ ಮರುದಿನ ನಿರಿಗೆ, ಗೆರೆಗಳು ಮಾಯವಾಗಿರುತ್ತವೆ.
ಮುಖಪುಟ / ವಾರ್ತೆಗಳು












Click it and Unblock the Notifications